April 14, 2011
ಕುರುಡನಿಗೆ ದೀಪ ಬೇಡವಾದರೆ (ಉತ್ತರ ಕನ್ನಡದ ಗಾದೆ – 249)
ಕುರುಡನಿಗೆ ದೀಪ ಬೇಡವಾದರೆ ಮನೆಮಂದಿಗೆಲ್ಲಾ ದೀಪ ಬೇಡವೇ? ಕುರುಡನಿಗೆ ದೀಪ ಇದ್ದರೂ, ಇಲ್ಲದಿದ್ದರೂ ವ್ಯತ್ಯಾಸವಾಗುವುದಿಲ್ಲ. ಆದರೆ ಮನೆಯಲ್ಲಿ ಕುರುಡರಲ್ಲದ ಇನ್ನಿತರರಿಗೆ ದೀಪದ ಅವಶ್ಯಕತೆ ಇರುತ್ತದೆ. ತನಗೆ ಉಪಯೋಗವಿಲ್ಲವೆಂದಾದ/ ಬೇಡವಾದ ವಸ್ತು ಇತರರಿಗೂ ಬೇಡವಾಗಿರುತ್ತದೆ ಎಂಬ ಅಭಿಪ್ರಾಯದಲ್ಲಿ ಕೆಲವರಿರುತ್ತಾರೆ. ಅಂಥವರ ಬಗ್ಗೆ ಬಳಸಬಹುದಾದ ಗಾದೆ ಇದು. ಉಳಿದೆಲ್ಲ ವೈಕಲ್ಯಗಳಿಗಿಂಥ ಕುರುಡುತನ ಕಷ್ಟದ್ದು. ಕಣ್ಣು ಇದ್ದವರಿಗಿಂತ ಎಷ್ಟೋ ಹೆಚ್ಚಿನ ಸಾಧನೆ ಮಾಡಿದ ಕುರುಡರೂ ಇದ್ದಾರೆ. ಎಲ್ಲಾ ಕುರುಡರ ಬಗ್ಗೆ ಅಪಾರ ಗೌರವಗಳೊಂದಿಗೆ ಈ ಗಾದೆಯನ್ನು ಬರೆಯುತ್ತಿದ್ದೇನೆ. ಓದುಗರು ಈ ಗಾದೆಯಲ್ಲಿ 'ಕುರುಡ' ಎಂಬ ಪದಕ್ಕೆ ಒತ್ತು ನೀಡದೆ, ಗಾದೆಯ ಒಳಾರ್ಥವನ್ನು ಗ್ರಹಿಸಲಿ ಎಂಬ ಆಶಯ ನನ್ನದು.
Subscribe to:
Post Comments (Atom)
3 comments:
ಸೀಮಾ ಅವರೇ,
ನಿಜ ಕುರುಡುತನ ಎಂಬ ವೈಕಲ್ಯ ಬಹಳ ಕಷ್ಟದ್ದು.. ಅಂತ ಕಷ್ಟದಲ್ಲಿ ಕೂಡ ಬಹಳಷ್ಟು ಸಾಧಿಸಿದವರು ಇದ್ದಾರೆ,ಅದರಲ್ಲಿ ಪುಟ್ಟರಾಜ ಗವಾಯಿಗಳು ಮತ್ತು ಬಸವಾನಂದ ಸ್ವಾಮಿಜಿ,ಒಬ್ಬರು ಸಂಗೀತ ಕ್ಷೇತ್ರದಲ್ಲಿ,ಇನ್ನೊಬ್ಬರು ಆರೋಗ್ಯ ಕ್ಷೇತ್ರದಲ್ಲಿ..
http://tv9heeguunte.blogspot.com/2009/04/shree-basavananda-swamiji.html
http://www.youtube.com/watch?v=8qSxDixUw60
ಒಂದು ವೇಳೆ, "ಕುರುಡನಿಗೆ ದೀಪ ಬೇಡವಾದರೂ ಮನೆಮಂದಿಗಾಗಿ ದೀಪ ಹಚ್ಚಿದ" ಎಂದಿದ್ದರೆ, ಚೆನ್ನಾಗಿರ್ತಿತ್ತಲ್ವೇ? "ಜ್ಞಾಪಕ ಚಿತ್ರಶಾಲೆ"ಯಲ್ಲಿ ಇಂಥದೊಂದು ಘಟನೆ ಬರತ್ತೆ. ಕಾಫಿ ಕುಡಿಯದ ಮಹಾನುಭಾವರು, ಕಾಫಿ ಗಿಡ ನೆಟ್ಟಿದ್ದರಂತೆ, ಬೇರೆಯವರಿಗಾಗಿ! ಅಂದ ಹಾಗೆ, ಕನ್ನಡಪ್ರಭ ಓದಿ ನಿಮ್ಮ ಭಿತ್ತಿಗೆ(ಬ್ಲಾಗಿಗೆ) ಬಂದೆ. ಇನ್ನಷ್ಟು ಬರೆಯಿರಿ :)
@ Girish,
Thanks. Neevu kotta link nodide.
@ Raveendra,
Neevu heliddu nija. Adu chennagirtittu. Houdu, namma taatandiru maavina gida nettiddakkagi ivattu namage maavina hannugalu!
Post a Comment