January 7, 2011

ಕೋಡ ಕೋಡ ಹೆಣ್ಣುಮಕ್ಕಳಿಗೆ (ಉತ್ತರ ಕನ್ನಡದ ಗಾದೆ – 247)

ಕೋಡ ಕೋಡ ಹೆಣ್ಣುಮಕ್ಕಳಿಗೆ ಕೋಡುಬಳೆಯೇ ಕಜ್ಜಾಯ.
ಕೋಡ= ಕೊಡಗ= ಮಂಗ. ಕೋಡುಬಳೆಯನ್ನು ಯಾರೂ ಸಾಮಾನ್ಯವಾಗಿ ಕಜ್ಜಾಯ ಎಂದು ಪರಿಗಣಿಸುವುದಿಲ್ಲ.
ಮಂಗಗಳಂತೆ ನಡುವಳಿಕೆಯುಳ್ಳ ಹೆಣ್ಣುಮಕ್ಕಳಿಗೆ ಕೋಡುಬಳೆಯನ್ನೇ ಕಜ್ಜಾಯವೆಂದು ನೀಡುತ್ತಾರೆ; ಅವರ ಯೋಗ್ಯತೆಗೆ ಅದೇ ಸಾಕು ಎಂದು. ಹಗುರವಾದ ವ್ಯಕ್ತಿತ್ವವುಳ್ಳವರನ್ನು ಇತರರು ಯಾವುದೋ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಅಂಥವರಿಗೆ ಕೊಡುವ ಬೆಲೆ ಕಡಿಮೆ ಎಂಬರ್ಥದ ಗಾದೆ.

2 comments:

ಸುಮ said...

ನಿಮ್ಮ ಬ್ಲಾಗ್ ತುಂಬಾ ಉಪಯುಕ್ತವಾಗಿದೆ ಸೀಮಾ . ಅಬ್ಬ!! ಎಷ್ಟೊಂದು ಗಾದೆಗಳ ಸಂಗ್ರಹ ಮಾಡಿದ್ದೀರಿ! ನಾನು ಚಿಕ್ಕಂದಿನಲ್ಲಿ ಊರಿನಲ್ಲಿದ್ದ ಅಜ್ಜಿಯರ ಬಳಿಯೆಲ್ಲಾ ಕೇಳಿ ಸುಮಾರು ಮುನ್ನೂರು ಗಾದೆಗಳ ಸಂಗ್ರಹ ಮಾಡಿದ್ದೆ . ಆದರೆ ಅದನ್ನು ಸರಿಯಾಗಿ ಕಾದಿಡದೆ ಕಳೆದು ಹೋಗಿತ್ತು. ನಿಮ್ಮ ಬ್ಲಾಗ್ ಮೂಲಕ ಎಲ್ಲ ನೆನಪಾಗುತ್ತಿದೆ ಧನ್ಯವಾದಗಳು.

Seema S. Hegde said...

ಧನ್ಯವಾದಗಳು ಸುಮಾ. ನಿಮಗೆಲ್ಲ ಇಷ್ಟವಾದರೆ ನನಗೆ ಖುಷಿ, ಶ್ರಮ ಸಾರ್ಥಕ.
ನಾನೂ ಕೂಡ ನನ್ನ ದೊಡ್ಡಮ್ಮನಿಂದ ಕೇಳಿ ಬರೆದಿಟ್ಟುಕೊಂಡ ಗಾದೆಗಳು ಇವು. ಗಾದೆ ಸಂಖ್ಯೆ ೧ ರಲ್ಲಿ ಆ ಬಗ್ಗೆ ಬರೆದಿದ್ದೇನೆ.
ಈಗ ದೊಡ್ಡಮ್ಮ ಇಲ್ಲ :(