October 31, 2010

ಅಪ್ಪಯ್ಯ ನನಗೆ ಹೊಡೆದ (ಉತ್ತರ ಕನ್ನಡದ ಗಾದೆ – 241 ಮತ್ತು 242 )

ಅಪ್ಪಯ್ಯ ನನಗೆ ಹೊಡೆದ, ನಾನು ಸಣ್ಣ ಮಾಣಿಗೆ ಹೊಡೆದೆ.
ತಪ್ಪು ಮಾಡಿದ್ದಕ್ಕಾಗಿ ಅಪ್ಪ ಹೊಡೆದಾಗ ಮಗ ಇನ್ನೇನೂ ಮಾಡುವಂತಿಲ್ಲ; ಹೊಡೆತ ತಿಂದ ಸಿಟ್ಟನ್ನು, ಬೇಸರವನ್ನೂ ತೀರಿಸಿಕೊಳ್ಳುವ ಸಲುವಾಗಿ ತನ್ನ ತಮ್ಮನಿಗೆ ಹೊಡೆಯುತ್ತಾನೆ. Boss ನಮ್ಮ ಮೇಲೆ ಸಿಟ್ಟನ್ನು ತೋರಿಸಿದಾಗ ನಾವು ಅಸಹಾಯಕರಾಗಿ, ಇನ್ನೇನೂ ಮಾಡಲರಿಯದೇ ನಮ್ಮ assistant ಮೇಲೆ ಸಿಟ್ಟು ಮಾಡುವಂಥದು. ಇಂಥದೇ ಇನ್ನೊಂದು- ಅತ್ತೆಯ ಮೇಲಿನ ಸಿಟ್ಟು ತೊತ್ತಿನ ಮೇಲೆ. ಅತ್ತೆಯ ಮೇಲೆ ಸಿಟ್ಟನ್ನು ತೋರಿಸುವಂತಿಲ್ಲ. ಅದಕ್ಕೇ ಸೊಸೆ ಕೆಲಸದವಳ ಮೇಲೆ ಸಿಟ್ಟು ತೋರಿಸುತ್ತಾಳೆ.

3 comments:

ಚುಕ್ಕಿಚಿತ್ತಾರ said...

displacement u kanree...!!!

defence mechanisammu...

ಮಹೇಶ ಭಟ್ಟ said...

ಹೌದು, ನಾವೆಲ್ಲರು ಇರುವದೇ ಹಾಗೆ. ಇಷ್ಟೊಂದು ಗಾದೆಗಳನ್ನು ಸಂಗ್ರಹಿಸಿದ ನಿಮಗೆ ಶುಭಾಶಯಗಳು

Seema S. Hegde said...

@ Chukki Chittara and Mahesh,
Thanks. I completely agree :-)