December 13, 2008
ಗೆಣಸಿನ ಬಳ್ಳಿ
ಹಿಂದೊಮ್ಮೆ ಗೆಣಸಿನ ಗಡ್ಡೆಗಳನ್ನು ಕೊಂಡಿದ್ದೆ. ಅವುಗಳಲ್ಲಿ ಮೂರೋ ಅಥವಾ ನಾಲ್ಕೋ ಗಡ್ಡೆಗಳನ್ನು ಉಪಯೋಗಿಸಿ ಉಳಿದ ಒಂದೆರಡನ್ನು ಹಾಗೆಯೇ ಇಟ್ಟಿದ್ದೆ. ಎಷ್ಟೋ ದಿನಗಳ ನಂತರ ನೋಡಿದರೆ ಅದರಲ್ಲಿ ಒಂದು ಗಡ್ಡೆಗೆ ಬೇರುಬರಲು ಶುರುವಾಗಿತ್ತು. ಅದನ್ನು ಒಂದು pot ನಲ್ಲಿ ನೆಟ್ಟೆ. ಬಳ್ಳಿ ದಿನದಿಂದ ದಿನಕ್ಕೆ ಚಿಗುರಿ ಬೆಳೆಯತೊಡಗಿತ್ತು. ಒಂದು ತಿಂಗಳ ನಂತರ ಅದಕ್ಕೆ ಆ pot ಚಿಕ್ಕದಾಯಿತು ಎಂದೆನಿಸಲು ಶುರುವಾಯಿತು. ಒಂದು ದೊಡ್ಡ pot ಕೊಂಡು ತಂದು ಅಳುಕು ಮನಸ್ಸಿನಿಂದಲೇ ಚಿಕ್ಕ pot ನಿಂದ ದೊಡ್ಡ pot ಗೆ transfer ಮಾಡಿದೆ. ಬಳ್ಳಿ ಬಾಡತೊಡಗಿದಾಗ ಇನ್ನೆಲ್ಲಿ ಸತ್ತೇ ಹೋಗುತ್ತದೆಯೇನೋ ಎಂದು ಕೊರಗಿದ್ದೆ. ಒಂದೆರಡು ದಿನದಲ್ಲಿ ಮತ್ತೆ ಹಸಿರಾಗಿ ಬೆಳೆಯತೊಡಗಿತು. Balcony ಯ grills ಗೆ ಹಬ್ಬತೊಡಗಿತು. ಆದರೆ ನಾನು ಇಲ್ಲಿ ಮನೆ ಖಾಲಿ ಮಾಡಿ ಭಾರತಕ್ಕೆ ಮರಳುತ್ತಿರುವುದರಿಂದ ಆ ಬಳ್ಳಿಯನ್ನು ಏನು ಮಾಡಬೇಕು ಎನ್ನುವ ಸಮಸ್ಯೆ ಶುರುವಾಯಿತು. ನನ್ನ ಇನ್ನಿತರ ಕೆಲವು ಸಣ್ಣ-ಪುಟ್ಟ pot ಗಳನ್ನು ಇಲ್ಲಿಯ ಕೆಲವು ಸ್ನೇಹಿತರಿಗೆ ಕೊಟ್ಟೆ. ಕೆಲವೊಂದಷ್ಟು ಗಿಡಗಳು ಚಳಿ ತಡೆಯಲಾರದೇ ಆಗಲೇ ಒಣಗಿಹೋಗಿದ್ದವು. ಅವುಗಳ ಅವಷೇಶವನ್ನೂ, ಮಣ್ಣನ್ನೂ dispose ಮಾಡಬೇಕಾಗಿತ್ತು. ಗೆಣಸಿನ ಬಳ್ಳಿಯ pot ದೊಡ್ಡದಿರುವುದರಿಂದ ಅದನ್ನು ಸ್ನೇಹಿತರ ಮನೆಗೆ train ನಲ್ಲಿ ಸಾಗಿಸುವುದೂ ಕೂಡ ಕಷ್ಟ. ಈ ಬಳ್ಳಿಯೂ ಕೂಡ ಚಳಿಗೆ ತನ್ನ ಎಲೆ ಉದುರಿಸಲು ಶುರುಮಾಡಿತ್ತು. ಆದರೆ ಅದು ಸಾಯುವುದಿಲ್ಲ ಎಂಬುದು ಖಂಡಿತ. ಇಲ್ಲಿನ ಗಿಡಗಳು ಚಳಿಗೆ ಒಂದೂ ಎಲೆ ಇಲ್ಲದಂತೆ ಎಲ್ಲವನ್ನೂ ಉದುರಿಸಿ ನಂತರ April ತಿಂಗಳಿನಲ್ಲಿ ಮತ್ತೆ ಚಿಗುರುತ್ತವೆ; ಹೂವಿನ ಗಿಡಗಳೂ ಕೂಡ. ಇನ್ನು ಕೆಲವು ಚಳಿಗಾಲದಲ್ಲಿಯೇ ಹೂವು ಬಿಡುವ ಜಾತಿಯ ಗಿಡಗಳು ಬೇರೆ. ಹಿಂದಿನ ಚಳಿಗಾಲದಲ್ಲಿ ಎಲ್ಲ ಗಿಡಗಳೂ ಸತ್ತೇ ಹೋದವೆಂದು ನಾನು ತಿಳಿದುಕೊಂಡು ಊರಿಗೆ ಬಂದಿದ್ದೆ. ಏನಾದರೂ ಆಗಲೀ ನೀರು ಮಾತ್ರ ಹಾಕುವುದನ್ನು ಬಿಡಬೇಡ ಎಂದು ರಾಜೀವನಿಗೆ ಹೇಳಿದ್ದೆ. ಮತ್ತೆ spring ನಲ್ಲಿ ನಾನು ಊರಿಂದ ಇಲ್ಲಿನ ಮನೆಗೆ ಬಂದು ಮೊದಲು ಮಾಡಿದ ಕೆಲಸವೇ balcony ಗೆ ಹೋಗಿ ಗಿಡಗಳು ಏನಾಗಿವೆ ಎಂದು ನೋಡಿದ್ದು. ಎಲ್ಲ ಗಿಡಗಳೂ ರಾಜೀವ ಹಾಕಿದ ನೀರು ಉಂಡು ಮತ್ತೆ ಚಿಗುರಿ ನಗುತ್ತಿದ್ದವು! ಈ ವರ್ಷದ spring ನಲ್ಲಿಯೂ ಅವೆಲ್ಲಾ ಮತ್ತೆ ಚಿಗುರುತ್ತವೆ ಎಂಬುದು ಗೊತ್ತಿತ್ತು. ಆದರೆ ಈಗ dispose ಮಾಡದೆ ಬೇರೆ ವಿಧಿಯಿಲ್ಲ. ಒಲ್ಲದ ಮನಸ್ಸಿನಿಂದ ಎಲ್ಲವನ್ನೂ dispose ಮಾಡುವ ನಿರ್ಧಾರಕ್ಕೆ ಬಂದೆ. ಸತ್ತಂತಿರುವ ಇತರ ಗಿಡಗಳನ್ನೂ, ಅವುಗಳ ಮಣ್ಣನ್ನೂ plastic bag ನಲ್ಲಿ ಸುರುವಿಕೊಂಡೆ. ಗೆಣಸಿನ ಬಳ್ಳಿಯನ್ನು ಆಗಲೇ pot ನಿಂದ ಆಗಲೇ ಖಾಲಿ ಮಾಡಲು ಮನಸ್ಸಾಗಲಿಲ್ಲ. ಏಕೆಂದರೆ ಅದಿನ್ನೂ ಹಸಿರಾಗಿ ಕಾಣುತ್ತಿತ್ತು. ಅದನ್ನು pot ಸಮೇತ bicycle ಮೇಲೆ ಹೇರಿಕೊಂಡು disposal ಜಾಗಕ್ಕೆ ಹೊರಟೆ. ನದಿಯ ಅಂಚಿಗೆ ಮಣ್ಣನ್ನು dispose ಮಾಡಲು ಜಾಗ ಇದೆ. ಅಲ್ಲಿ ತಲುಪಿ plastic bag ನಲ್ಲಿದ್ದ ಎಲ್ಲಾ ಮಣ್ಣನ್ನೂ ಸುರುವಿದೆ. ಗೆಣಸಿನ ಬಳ್ಳಿಯ pot ಕೂಡ ಖಾಲಿ ಮಾಡಲೇ ಬೇಕಾಗಿತ್ತು. ಅದನ್ನು ಸುರುವಿ ನೋಡಿದರೆ ನಾನು ನೆಟ್ಟ ದೊಡ್ಡ ಗೆಣಸಿನ ಗಡ್ಡೆ ಮೂರು ನಾಲ್ಕು ಚಿಕ್ಕ ಚಿಕ್ಕ ಗಡ್ದೆಗಳಾಗಿ ಮರಿಯೊಡೆದಿತ್ತು. ನಾನೆಷ್ಟು ಕಟುಕಿ ಎಂದೆನಿಸಿ ಅಳುವೇ ಬಂತು. ಆ ಗಡ್ಡೆಗಳನ್ನೂ, ಬಳ್ಳಿಯನ್ನೂ ಅದೇ ಮಣ್ಣಿನಲ್ಲಿ ಊರಿದಂತೆ ಮಾಡಿ, ತಿರುಗಿ ನೋಡದೆ bicycle ಹತ್ತಿ ಹೊರಟೆ. ಅಯ್ಯೋ ದೇವರೇ ಒಂದು ಮಳೆಯಾದರೂ ಬಂದರೆ ನನ್ನ ಬಳ್ಳಿ ಅಲ್ಲಿಯೇ ಜೀವ ಹಿಡಿದುಕೊಂಡು ಪುನಃ ಹಬ್ಬಬಹುದೇನೋ. ಮನೆಗೆ ಬಂದವಳೇ weather forecast ನೋಡಿದೆ, ಭಾನುವಾರ ಮಳೆ ಎನ್ನುತ್ತಿತ್ತು. ಭಾರತಕ್ಕೆ ಹೊರಡುವ ಮೊದಲು ಮಾಡಿ ಮುಗಿಸಬೇಕಾಗಿರುವ ಕೆಲಸಗಳ list ನಲ್ಲಿ ‘dispose off plants and soil' ಎಂಬುದರ ಮೇಲೆ ಅಡ್ಡ ಗೆರೆ ಎಳೆದೆ ಆದರೆ ಆದರೆ ಮಗನ ಶ್ರಾದ್ಧ ಮಾಡಿ ಮುಗಿಸಿದ ತಂದೆಯೊಬ್ಬನ ಮನಸ್ಸಿನಂತಾಗಿತ್ತು ಮನಸ್ಸು.
Subscribe to:
Post Comments (Atom)
11 comments:
ಸೀಮಕ್ಕಾ...
ಬಲುಸುಂದರವಾದ ಅಲೆಮಾರಿ ಬದುಕು ನಮ್ಮದು. ಹೀಗೆಯೇ ನೆಟ್ಟಿದ್ದನ್ನು ನೆಟ್ಟಲ್ಲಿಯೇ ಇಟ್ಟು, ಬಿಡಬೇಕಾದ್ದನ್ನ ಅಲ್ಲಿಯೇ ಬಿಟ್ಟು ಸುಂದರ ಬದುಕಿನ ಹಂದರದೊಳಗಿನ ಅಲೆಮಾರಿ ಬಳ್ಳಿಗಳಾಗಿದ್ದೇವೆ ನಾವೇ. ಇನ್ನು ನಾವು ನೆಟ್ಟ ಬಳ್ಳಿಗಳದೇನು ಬಿಡು.
ಬದುಕು ಇಷ್ಟೇ ಸೀಮಕ್ಕ. ನಿನ್ನೊಡನೆ ದನಿಗೂಡಿಸಲು ಯಾವತ್ತೂ ನಾನೂ ಇದ್ದೇನೆ. ಕಾಲಿಗೆಚುಚ್ಚಿಕೊಂಡ ಕಲ್ಲನ್ನೂ ಪ್ರೀತಿಸುತ್ತೇವಲ್ಲ ನಾವು...ಅದಕ್ಕೇ ಇಷ್ಟು ನೋವು. ಯಾವುದನ್ನೂ ಪ್ರೀತಿಸಲೇಬಾರದೆನ್ನಿಸುತ್ತದೆ.
‘ನಗುವಾಗ ನಕ್ಕು ಅಳುವಾಗ ಅತ್ತು ,ಮುಗಿದಿತ್ತು ಅರ್ಧ ದಾರಿ’
ಹ್ಯಾಪಿ ಜರ್ನಿ ಸೀಮಕ್ಕಾ...:-)
very touchy...specially the last line.
:-) :-(
Welcome back... ನಿಜ, ನಾವೇ ನೆಟ್ಟದ್ದು ಕೀಳುವುದು ಸುಲಭಕ್ಕೆ ಸಾಧ್ಯವಾಗದ ಕೆಲಸ.
ಸೀಮಕ್ಕ,
ಮನ ಮುಟ್ಟುವ ಬರಹ.
ಗೆಡ್ಡೆ ಮೇಲಿನ ನಿಮ್ಮ ಪ್ರೀತಿ ಆಪ್ತವಾಗಿ ಕಾಡುತ್ತದೆ. Welcome to India.
:-) :-(
ಹಾಯ್ ಸೀಮಾರವರೆ,
ನಿಮ್ಮ ಬರಹದ ಹಿ೦ದಿರುವ ಸೂಕ್ಷ್ಮ ಸ೦ವೇದನೆ ನಿಜಕ್ಕೂ ಮನ ಮುಟ್ಟಿತು. ತನ್ನ ಬಿಡುವಿನ ವೇಳೆಯಲ್ಲಿ ನೆಟ್ಟ ಗಿಡಗಳ ಬಗೆಗೂ ನನ್ನಮ್ಮ ತುಂಬಾ ಮೃದುವಾದ ಭಾವ ಸ೦ಬ೦ಧ ಹೊಂದಿದ್ದಾರೆ..
ಕೆಲವು ಬದುಕಿನ ಮೌಲ್ಯಗಳು ನನ್ನ ಕನಸಿನಲ್ಲಿ ಅನಾವರಣಗೊಳ್ಳುತ್ತವೆ. ಇ೦ತಹ ಕನಸುಗಳ ನನ್ನ ಬ್ಲಾಗುಗಳನ್ನೊಮ್ಮೆ (ಕನ್ನಡ & ಇಂಗ್ಲಿಷ್) ಬಿಡುವಾದಾಗ ನೋಡಿ.
~ಸುಷ್ಮಸಿ೦ಧು
@ ಶಾಂತಲಾ,
ಥ್ಯಾಂಕ್ಸ್ ಬಿಟ್ಟು ಇನ್ನೇನು ಹೇಳಲಿ?
@ ಲಕ್ಷ್ಮಿ,
ಧನ್ಯವಾದಗಳು. ನನಗೆ ನಿಜಕ್ಕೂ ಹಾಗೆ ಅನಿಸಿತ್ತು :(
@ ಹರೀಶ, ವಿಕಾಸ
:-( ಅರ್ಥ ಆತು. ಆದ್ರೆ, :-) ಎಂತಕ್ಕೆ ಎಂತಕ್ಕೆ ಹೇಳಿ ಗೊತ್ತಾಜಿಲ್ಲೆ. ನಾನು ವಾಪಸ್ ಬರ್ತಾ ಇದ್ದಿದ್ದಕ್ಕೆ ಅಂದುಕೊಂಡಿ.
@ ಶ್ರೀ,
ತುಂಬಾ ಥ್ಯಾಂಕ್ಸ್ ಶ್ರೀ. ಬೆಂಗಳೂರಿನಲ್ಲಿ ಸಿಗ್ತೇನೆ.
@ ಶಿವು,
ತುಂಬಾ ಥ್ಯಾಂಕ್ಸ್.
@ ಸುಷ್ಮಾ ಸಿಂಧು,
ಭೇಟಿಯಿತ್ತಿದ್ದಕ್ಕೆ ಥ್ಯಾಂಕ್ಸ್.
ಮೆಚ್ಚಿಕೊಂಡಿದ್ದಕ್ಕೆ ಇನ್ನೂ ಥ್ಯಾಂಕ್ಸ್ :)
ನೀ ಅಂದ್ಕಂಡಿದ್ದು ಸರಿ ಇದ್ದು . ಆದ್ರೆ ನೀ ’ವಾಪಸ್’ ಬರ್ತಾ ಇದ್ದಿದ್ದಕ್ಕೆ ಅಂತ ಅಲ್ಲ. ನೀ ಬರ್ತಾ ಇದ್ದಿದ್ದಕ್ಕೆ ಅಷ್ಟೆ :)
ಹರೀಶಂದು ಇದೇ ಉತ್ರ ಅನ್ಕತ್ತಿ :)
ವಿಕಾಸ,
ನಾನು ಬಂದು ಮುಟ್ಟಿದ್ದಿ.
ಬೆಂಗಳೂರಲ್ಲಿ ಸಿಕ್ತಿ :)
Post a Comment