December 17, 2008

ಹಾಡಿ ಹರಸಿ (ಉತ್ತರ ಕನ್ನಡದ ಗಾದೆ – 234 ಮತ್ತು 235 )

ಹಾಡಿ ಹರಸಿ ಮಗಳೇ ನಿನ್ನ ಪುಣ್ಯ ಎಂದಿದ್ದರು.
ಮಗಳಿಗೆ ಸಹಾಯ ಮಾಡುವಷ್ಟು ಮಾಡಬಹುದು ನಂತರ ಕೈಮೀರಿದಾಗ ಹಣೆಬರಹದಲ್ಲಿದ್ದಂತೆ ಆಗುತ್ತದೆ ಎಂದು ಸುಮ್ಮನಿರಬೇಕಾಗುತ್ತದೆ. ಬುದ್ಧಿ ಮಾತನ್ನು ಹೇಳುವಷ್ಟು ಹೇಳುವುದು ಒಂದು ವೇಳೆ ಅವರು ಕೇಳದಿದ್ದರೆ ನಂತರ ಅದೃಷ್ಟವಿದ್ದಂತೆ ಆಗುತ್ತದೆ ಎಂದು ಕೈಚೆಲ್ಲುವುದು. ಹೆಚ್ಚು-ಕಮ್ಮಿ ಇದೇ ಅರ್ಥದ ಇನ್ನೂ ಒಂದು ಮಾತಿದೆ- ಮರ ಹತ್ತುವವನನ್ನು ಕೈಗೆಟುಕುವವರೆಗೆ ಮಾತ್ರ ನೂಕಬಹುದು. ಮೊನ್ನೆ ಅಪ್ಪನ ಜೊತೆ phone ನಲ್ಲಿ ಮಾತನಾಡುವಾಗ ಅಪ್ಪ ಯಾರೋ ಒಬ್ಬರ ಬಗ್ಗೆ ಹೇಳುತ್ತಿದ್ದರು. ನಾನು ಆಗ ಹೇಳಿದೆ, "ಹೋಗ್ಲಿ ಬಿಡು ಅಪ್ಪ, ನೀನು ಎಷ್ಟು ಎಂದು ಸಹಾಯ ಮಾಡಲು ಸಾಧ್ಯ? ಮರ ಹತ್ತುವವನನ್ನು ಎಲ್ಲಿಯ ತನಕ ನೂಕಲು ಸಾಧ್ಯ?". ಆಗ ಅಪ್ಪ ಹೇಳಿದ್ದು- "ಈಗಿನ ಕಾಲಕ್ಕೆ ಮರ ಹತ್ತುವವನನ್ನು ಸ್ವಲ್ಪವೂ ನೂಕಲು ಸಾದ್ಯವಿಲ್ಲ, ಎಲ್ಲರೂ ಅವರವರೆ ಹತ್ತಬೇಕು. ನೋಡು ಅಲ್ಲೊಂದು ಮರ ಇದೆ, ಬೇಕಾದರೆ ಹತ್ತು ಎಂದು ತೋರಿಸಬಹುದು ಅಷ್ಟೇ!!"

6 comments:

Ittigecement said...

ಸೀಮಾ...

"ದೇವರ ಹಣೆಯಲ್ಲಿ ಭಗವಂತ ಬರೆದಾಂಗೆ ಆಗ್ತು..!!"

ಇಂಥಹದೊಂದು ಗಾದೆ ನಮ್ಮ ಕಡೆ ಹಾಸ್ಯಕಾಗಿ ಇದ್ದು..
ಯಾವುದೂ ನಮ್ಮ ಕೈಯಲಿಲ್ಲ.ಅಂದು ಹೇಳುವದಕ್ಕೆ..

ಮಗಳನ್ನು ಪ್ರೀತಿಯಿಂದ ದೊಡ್ಡ ಮಾಡಿ ಬೆಳಸಿ..
ಮದುವೆ ಮಾಡಿದ ಮೇಲೆ ..
"ಕೊಟ್ಟ ಹೆಣ್ಣು ಕುಲದ ಹೊರಗೆ..!'
ಅಂದು ಬಿಟ್ಟರೆ ಹೇಗೆ...?
ರಾಶಿ ಬೇಜಾರು.. ಅಲ್ದ..?

ವಿಷಯ ಬೇರೆ ಬದಿಗೆ ಹೋಗಿದ್ದಕ್ಕೆ ಕ್ಷಮೆ ಇರಲಿ..

ಗಾದೆ ಓದಿದ ಮೇಲೆ ಇದೆಲ್ಲ ವಿಚಾರ ಬಂತು..
ಗಾದೆ ಚೊಲೊ ಇದ್ದು..

ಅದೆಲ್ಲ ಸಾಯಲಿ ಬಿಡು..!
"ನಮ್ಮನೆ" ಕಡೆ ಬಂಜೇ ಇಲ್ಲೇ.."

Seema S. Hegde said...

ಸಿಮೆಂಟು ಮರಳಿನ ಮಧ್ಯೆ,
ನೀವು ಹೇಳಿದ್ದು ಸತ್ಯ.
ತಿರುಗಾಟ ಪೂರೈಸ್ತಾ ಇಲ್ಲೆ. ನಿಮ್ಮ ಮನೆಗೂ ಬರ್ತಿ ಒಂದು ದಿನ!! :)

ದೀಪಸ್ಮಿತಾ said...

ನಿಮ್ಮ ಬ್ಲಾಗ್ ನೋಡಿರ್ಲಿಲ್ಲೆ. ಎಷ್ಟ್ ಗಾದೆಗಳನ್ನ ಸಂಗ್ರಹ ಮಾಡಿದ್ರಿ. ನಾನು ಮಲೆನಾಡಿನವ್ನಾದ್ರೂ ಇಷ್ಟೆಲ್ಲ ಗಾದೆ ಇದ್ದಿದ್ ಗೊತ್ತಿರ್ಲಿಲ್ಲೆ.

Seema S. Hegde said...

@ ದೀಪಸ್ಮಿಥಾ,
ಧನ್ಯವಾದಗಳು ಇಷ್ಟಪಟ್ಟಿದ್ದಕ್ಕೆ :-)
ಇನ್ನೂ ಎಷ್ಟೊಂದು ಗಾದೆ ಗೊತ್ತಿದ್ದು, ಆದ್ರೆ ಬರೆಯಲ್ಲೆ ಟೈಮೇ ಇಲ್ಲೇ :-(

Ittigecement said...

ಸೀಮಾರವರೆ...

ಏನು ನಾಪತ್ತೆ ಆಗಿಬಿಟ್ಟಿದ್ದೀರಿ...??
ಬ್ಲಾಗ್ ಅಪ್ ಡೇಟ್ ಮಾಡಿ...

ಪ್ರಕಾಶಣ್ಣ...

Seema S. Hegde said...

@ ಸಿಮೆಂಟು ಮರಳಿನ ಮಧ್ಯೆ,
ಪ್ರಕಾಶಣ್ಣ,
ಹೌದು. ಈ ನಡುವೆ ಸ್ವಲ್ಪ busy :(
ಕೆಲಸ ಜಾಸ್ತಿ; ಆರೋಗ್ಯದಲ್ಲಿ ತೊಂದರೆ. :(
ಮತ್ತೆ blog update ಮಾಡುವ ಮನಸ್ಸಿದ್ದರೂ ಪುರಸೊತ್ತು ಇಲ್ಲೆ.
ಕಾಳಜಿಗೆ, ಅಭಿಮಾನಕ್ಕೆ thanks :)
ಮತ್ತೆ time ಸಿಕ್ಕಾಗ ಖಂಡಿತ ಬರಿತಿ.