Lines from my diary have come on this page, you must be lucky!
November 25, 2008
ಸ್ವಾರ್ಥವೂ ಆಗಬೇಕು (ಉತ್ತರ ಕನ್ನಡದ ಗಾದೆ – 225 ಮತ್ತು 226 )
ಸ್ವಾರ್ಥವೂ ಆಗಬೇಕು, ಸ್ವಾಮಿ ಸೇವೆಯೂ ಆಗಬೇಕು. ಒಡೆಯನ ಸೇವೆ ಮಾಡುವ ನೆಪದಲ್ಲಿ ಸ್ವಕಾರ್ಯ ಸಾಧನೆ ಮಾಡಿಕೊಳ್ಳುವವರನ್ನು ಕುರಿತಾದ ಮಾತು ಇದು. ಬೇರೆಯವರ ಹೆಳೆ, ತನ್ನ ಬೆಳೆ ಎಂದೂ ಕೂಡ ಹೇಳುತ್ತಾರೆ. ಹೆಳೆ ಎಂದರೆ ನೆಪ. ಬೇರೆಯವರಿಗೆ ಸಹಾಯ ಮಾಡುವ ನೆಪದಲ್ಲಿ ತಾನು ಲಾಭ ಮಾಡಿಕೊಳ್ಳುತ್ತಾನೆ(ಳೆ) ಎಂಬ ಅರ್ಥ.
ಶಾಂತಲಾ, Thanks ನಿನ್ನ ಅಭಿನಂದನೆಗಳಿಗೆ :) "ಬಗ್ಗಿದಾಗಲೇ ಆಚೆ ಮನೆ ಅತ್ತೇರಿಗೂ ಒಂದು ನಮಸ್ಕಾರ" ಹೇಳಿ. ಹೆಚ್ಚು - ಕಮ್ಮಿ ಒಂದೇ ಅರ್ಥ... ಆದರೆ ಇದ್ರಲ್ಲಿ ಸ್ವಾರ್ಥ ಜಾಸ್ತಿ ಇರ್ತಿಲ್ಲೆ ಅಷ್ಟೇಯ. ಸ್ವಲ್ಪ lighter situations ನಲ್ಲಿ ಬಳಸ್ತ.
6 comments:
ಸೀಮಕ್ಕಾ...
ಬಗ್ಗಿದಲ್ಲೇ ಅತ್ತೇರಿಗೂ ಒಂದು ನಮಸ್ಕಾರ (ಬಗ್ಗಿದಂಗೂ ಆತು, ಅತ್ತೇರಿಗೊಂದು ನಮಸ್ಕಾರನೂ ಆತು ) ಹೇಳ್ತ್ವಲೆ...ಈ ಗಾದೆನೂ ಇದೇ ಅರ್ಥ ಕೊಡ್ತು ಅಲ್ದಾ?
ಯಾವಾಗ್ಲೋ ಇನ್ನೂರು ದಾಟಿ ಮುಂದೆ ನಡದ್ದೆ!! ಬರೇ ಗಾದೆಮಾತ್ರ ನೋಡಿದಿದ್ದಿ, ಗಾದೆಸಂಖ್ಯೆ ನೋಡಿದಿದ್ನೇ ಇಲ್ಲೆ...ಲೇಟಾಗಿ ಅಭಿನಂದನೆ ಇನ್ನೂರು ದಾಟಿದ್ದಕ್ಕೆ :-)
ಶಾಂತಲಾ,
Thanks ನಿನ್ನ ಅಭಿನಂದನೆಗಳಿಗೆ :)
"ಬಗ್ಗಿದಾಗಲೇ ಆಚೆ ಮನೆ ಅತ್ತೇರಿಗೂ ಒಂದು ನಮಸ್ಕಾರ" ಹೇಳಿ. ಹೆಚ್ಚು - ಕಮ್ಮಿ ಒಂದೇ ಅರ್ಥ... ಆದರೆ ಇದ್ರಲ್ಲಿ ಸ್ವಾರ್ಥ ಜಾಸ್ತಿ ಇರ್ತಿಲ್ಲೆ ಅಷ್ಟೇಯ. ಸ್ವಲ್ಪ lighter situations ನಲ್ಲಿ ಬಳಸ್ತ.
ಗಾದೆ..ಅದರ ಭಾವಾರ್ಥ..ಎರಡೂ ತುಂಬಾ ಚಂದ ಇದ್ದು.
ಹಳೆ ಕೆಂಪಜ್ಜಿ ಹೇಳಿದ ಕಥೆ ಬರದ್ದಿ.. ನನ್ನ ಬ್ಲೊಗ್ ನೋಡು..
ರಾಶಿ ರಾಶಿ ಧನ್ಯವಾದಗಳು...
@ ಸಿಮೆಂಟು ಮರಳಿನ ಮಧ್ಯೆ,
Thanks :)
ಆತ್ಮೀಯ ಉತ್ತರ ಕನ್ನಡಿಗರಿಗೆ ನಮಸ್ಕಾರ...
ನಾನೂ ಉತ್ತರ ಕನ್ನಡದವನೇ - ಹೊನ್ನಾವರದವನು. ಗಾದೆ ಮಾತುಗಳಿಗೆ ನೀವು ಕೊಟ್ಟಿರುವ ವಿವರಣೆ ಬಹಳ ಚಂದದ ಶೈಲಿಯಲ್ಲಿದೆ. ನವಿರಾದ ಹಾಸ್ಯವೂ ಅಲ್ಲಲ್ಲಿ ಇಣುಕಿ ಮನಸ್ಸಿಗೆ ಮುದ ನೀಡುತ್ತದೆ.
ಧನ್ಯವಾದಗಳು.
-ಕವಿಕಿರಣ.
kiranfern@gmail.com
@ ಕಿರಣ,
ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ, ಮೆಚ್ಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.
ಬರುತ್ತಿರಿ :)
Post a Comment