November 24, 2008

ಸೋರೆಯಿಂದ (ಉತ್ತರ ಕನ್ನಡದ ಗಾದೆ – 224)

ಸೋರೆಯಿಂದ ಏಳ (ಏಳುವುದಿಲ್ಲ), ಗುಂಜಿನಿಂದ ಬಿಡ (ಬಿಡುವುದಿಲ್ಲ).
ಸೋರೆ ಮತ್ತು ಗುಂಜು ಎರಡೂ ಹಲಸಿನ ಹಣ್ಣಿನೊಳಗಿನ ಭಾಗಗಳು.
ಹಲಸಿನ ತೊಳೆಯನ್ನು ಸೋರೆಯಿಂದ ಬಿಡಿಸತೊಡಗಿದರೆ ಗುಂಜಿಗೆ ಅಂಟಿಕೊಳ್ಳುತ್ತದೆ, ಗುಂಜಿನಿಂದ ಬಿಡಿಸತೊಡಗಿದರೆ ಸೋರೆಗೆ ಅಂಟಿಕೊಳ್ಳುತ್ತದೆ. ಯಾವ ಕೆಲಸವನ್ನು ಮಾಡಿದರೆ ಸರಿ ಎಂದು ಬಗೆಹರಿಯದೆ ಎರಡರ ನಡುವೆಯೂ ಹೊಯ್ದಾಡುತ್ತಿದ್ದರೆ ಈ ಮಾತು ಅನ್ವಯಿಸುತ್ತದೆ. ಒಮ್ಮೆ ಒಂದು ಸರಿ ಎನಿಸಿದರೆ ಮತ್ತೊಮ್ಮೆ ಇನ್ನೊಂದು ಸರಿ ಎನಿಸುತ್ತದೆ. ಉತ್ತರ ಕನ್ನಡದ ಹವ್ಯಕರಲ್ಲಿ ಇದಕ್ಕೆ 'ಹಲವರಿಯುವುದು' ಎಂಬ ವಿಶೇಷ ಶಬ್ದ ಇದೆ. ಅಂದರೆ ಹಲವಾರು ವಿಚಾರಗಳು ಸರಿ ಎನಿಸುತ್ತವೆ, ಯಾವುದನ್ನು ಅನುಸರಿಸುವುದು ಎಂದು ಗೊತ್ತಾಗುವುದಿಲ್ಲ.

3 comments:

ಸಿರಿರಮಣ said...

mostly ಅದು ’ ಸಾರೆ "

ಸಿರಿರಮಣ said...

ಇನ್ನೊಂದು ಗಾದೆ, ಕಾಗೆಗೆ .... ಇದ್ದರೆ ಹಾರವುವಾಗ ಕಾಣಬಹುದು.

ಗಡಿಬಿಡಿ ಮಾಡುವುದು ಏತಕ್ಕೆ ಸ್ವಲ್ಪ ತಡೆದರೆ ಎಲ್ಲವೂ ತಿಳಿಯುತ್ತದೆ.ಕಾದು ನೋಡುವ ಸ್ವಭಾವ ಬೇಕು. ಎಂಬರ್ಥದಲ್ಲಿ ಉ.ಕ.ದಲ್ಲಿ ಬಳಕೆಯಾಗುತ್ತಿದೆ.

Seema S. Hegde said...

@ ಸಿರಿರಮಣ,
ನಾನು ಕೇಳಿದ್ದು ಮಾತ್ರ 'ಸೋರೆ' ಎಂದೇ.

ಇದೊಂದು ಹೊಸ ಗಾದೆ ನನಗೆ, ಈ ಮೊದಲು ಎಲ್ಲಿಯೂ ಕೇಳಿರಲಿಲ್ಲ. ತುಂಬಾ ಧನ್ಯವಾದಗಳು ತಿಳಿಸಿಕೊಟ್ಟಿದ್ದಕ್ಕೆ, ಭೇಟಿಯಿತ್ತಿದ್ದಕ್ಕೆ :)