November 19, 2008

ಪಾತ್ರೆಯಲ್ಲಿದ್ದರೆ (ಉತ್ತರ ಕನ್ನಡದ ಗಾದೆ – 219)

ಪಾತ್ರೆಯಲ್ಲಿದ್ದರೆ ಸೌಟಿಗೆ ಬರುತ್ತದೆ.
ಯಾರ ಬಳಿಯಾದರೂ ಒಂದು ವಿಷಯವನ್ನು ಕೇಳಿದಾಗ ಅವರಿಗೆ ಗೊತ್ತಿದ್ದರೆ ಮಾತ್ರ ಹೇಳಲು ಬರುತ್ತದೆ. ಅಥವಾ ಹಣ ಕೂಡ ಅವರ ಬಳಿ ಇದ್ದರೆ ಮಾತ್ರ ಕೊಡಲು ಸಾಧ್ಯವಾಗುತ್ತದೆ ಇಲ್ಲವಾದರೆ ಸಾಧ್ಯವಿಲ್ಲ ಎಂಬ ಎರಡು ಸಂದರ್ಭಗಳಲ್ಲಿ ಬಳಸಬಹುದು. ಗೊತ್ತಿಲ್ಲದ ವಿಷಯವನ್ನು ಗೊತ್ತಿದೆ ಎಂದು ಬಡಾಯಿ ಕೊಚ್ಚಿಕೊಂಡ ಮಾತ್ರಕ್ಕೆ ಆ ವಿಷಯವನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಪಾತ್ರೆಯಲ್ಲಿದ್ದರೆ ತಾನೆ ಸೌಟಿಗೆ ಬರುವುದು?

2 comments:

Shrinidhi Hande said...

New one to me..ಇದೇ ಮೊದಲ ಸಲ ಕೆಳ್ತಾ ಇದ್ದೀನಿ. thanks for introducing

Seema S. Hegde said...

@ ಶ್ರೀನಿಧಿ,
ಓಹ್! ಹೌದಾ? Thanks a lot for visiting!!