November 12, 2008

ಸಲಿಗೆ ಕೊಟ್ಟರೆ … (ಉತ್ತರ ಕನ್ನಡದ ಗಾದೆ – 212, 213 ಮತ್ತು 214)

ಸಲಿಗೆ ಕೊಟ್ಟರೆ ನಾಯಿ ಸೊಟ್ಟಗ ನೆಕ್ಕಿತ್ತು.
ಅತಿಯಾದ ಸಲಿಗೆ ಕೊಟ್ಟರೆ ನಾಯಿ ಅಡಿಗೆಯನ್ನು ಬಡಿಸುವ ಸೌಟನ್ನೇ (ಸೊಟ್ಟಗ) ನೆಕ್ಕಲು ಮುಂದಾಗುತ್ತದೆ. ಅಂತೆಯೇ ಯಾರಿಗಾದರೂ ಸ್ವಲ್ಪ ಸಲಿಗೆ ಕೊಟ್ಟರೂ ನಮ್ಮ ವೈಯಕ್ತಿಕ ವಿಷಯಗಳವರೆಗೆ ಮುಂದುವರಿದರೆ ಈ ಗಾದೆಯನ್ನು ಹೇಳುತ್ತಾರೆ. ಸಲಿಗೆ ಕೊಟ್ಟರೆ ನಾಯಿ ನೊಸಲು (ಹಣೆ) ನೆಕ್ಕಿತ್ತು ಎಂದೂ ಕೂಡ ಹೇಳುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುತ್ತಾರೆ ಎಂದೂ ಅಥವಾ ಮುಂಗೈ ಕೊಟ್ಟರೆ ಅಂಗೈಯನ್ನೇ ಹಿಡಿಯುತ್ತಾರೆ ಎಂದೂ ಬಳಸುವುದುಂಟು.

4 comments:

Ittigecement said...

ಎಲ್ಲದೂ ಚೊಲೊ ಇದ್ದು.
ಕಟಕಟೆ ದೇವರಿಗೆ ಮರದ ಜಗಟೆ (ಜಂವಟೆ).. ಇದನ್ನು ಕೇಳಿದ್ರ?
ನನ್ನ ಬ್ಲೊಗ್ ಗೂ ಸಾಧ್ಯವಾದಾಗ ಬನ್ನಿ.
ಕರೆದರೆ ಬಾರದ ಅಳಿಯ ಒಳ್ಳುಕಲ್ಲು ನೆಕ್ಕಿದ್ನಡ!! ಇದು ಗಾದೆ ಲೀಸ್ಟಿಗೆ..ತಗಳಿ..!

Seema S. Hegde said...

@ ಸಿಮೆಂಟು ಮರಳಿನ ಮಧ್ಯೆ,
Thanks. ಆದ್ರೆ ಈ ಗಾದೆ ಎಲ್ಲಾ ಮೊದ್ಲೇ ಹಾಕಿಗಿದಿ :)

Harisha - ಹರೀಶ said...

ಸೀಮಕ್ಕಾ, ಸಲಿಗೆ ಕೊಟ್ರೆ ತಲೆ ಮೇಲೆ ಹತ್ತಿ ಕೂರ್ತ ಅಂತ್ಲೂ ಎಂತೋ ಇದ್ಹಂಗೆ ನೆನಪು.. ಅದರ ಬಗ್ಗೆ ಗೊತ್ತಿದ್ದ?

Seema S. Hegde said...

@ ಹರೀಶ,
ಯಂಗೆ ಗೊತ್ತಿದ್ದ ಮಟ್ಟಿಗೆ ಅದು ಗಾದೆ ಅಲ್ಲ. ಸುಮ್ನೆ ಹಂಗೆ ಹೇಳ್ತ ಅಷ್ಟೇಯ.
ಸಲಿಗೆ ಕೊಟ್ರೆ ತಲೆ ಮೇಲೇ ಹತ್ತಿ ಕುತ್ಗತ್ತ ಹೇಳಿ.
ಸಲಿಗೆ ಕೊಟ್ರೆ ತಲೆ ಮೇಲೆ ಮೆಣಸು ಅರಿತ ಅಂತ ಕೂಡ ಹೇಳ್ತ.