Lines from my diary have come on this page, you must be lucky!
November 7, 2008
ಹಾಡು ಹೇಳಿದವರಿಗೂ … (ಉತ್ತರ ಕನ್ನಡದ ಗಾದೆ – 211)
ಹಾಡು ಹೇಳಿದವರಿಗೂ ಮೂರು ಸುಕನುಂಡೆ, ಹಾಡು ಹೇಳದಿದ್ದವರಿಗೂ ಮೂರು ಸುಕನುಂಡೆ. ಸುಕನುಂಡೆ ಅಂದರೆ ಒಂದು ಬಗೆಯ ಸಿಹಿ ತಿಂಡಿ. ಕೆಲಸ ಮಾಡಿದವರಿಗೂ, ಮಾಡದಿದ್ದವರಿಗೂ ಒಂದೇ ತರಹದ ಅತಿಥ್ಯ, recognition ಸಿಕ್ಕಾಗ ಹೇಳುವಂಥ ಮಾತು.
8 comments:
ನನಗೆ ಮತ್ತೊಂದು ಗಾದೆ ಮಾತು ಸಿಕ್ಕಂತಾಯಿತು. Thanks.
@ Shivu,
Thanks :)
ಈ ಗಾದೆ ನಂಗೆ ಹೊಸದು. ಚೊಲೊ ಇದ್ದು.
ಹಾಡಿ ಹಾಡಿ ರಾಗ..ಉಗುಳಿ ಉಗುಳಿ ರೋಗಾ..!!
@ ಸಿಮೆಂಟು ಮರಳಿನ ಮಧ್ಯೆ,
ನಂಗೆ ಗೊತ್ತಿದ್ದಿದ್ದು "ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ" ಹೇಳಿ.
ಎರಡರ ಅರ್ಥ ಒಂದೇಯ...ಅಳಿಯ ಅಲ್ಲ ಮಗಳ ಗಂಡ :-)
ಯಂಗೆ ಗಣೇಶಣ್ಣ ಸುಕ್ಕುನುಂಡೆ ಸುಕ್ಕುನುಂಡೆ ಹೇಳಿ ಕರೀತಿದ್ದ.. ಹಂಗಂದ್ರೆ ಎಂತು ಅಂತ ಇನ್ನೂ ಗೊತ್ತಾಜಿಲ್ಲೆ :-(
ಅಮ್ಮಂಗ್ ಹೇಳಿ ಒಂದ್ಸಲ ಮಾಡ್ಸ್ಕ್ಯಂಡ್ ತಿನ್ನವು :-)
@ ಹರೀಶ,
ಗಣೇಶಣ್ಣ ಯಂತಕ್ಕೆ ಹಂಗೆ ಕರೀತಿದ್ದ ನಿನ್ನ?!!!
ಸುಕನುಂಡೆ ಅಂದ್ರೆ...ಯಂಗೆ ಗೊತ್ತಿದ್ದ ಮಟ್ಟಿಗೆ...ಒಬ್ಬಟ್ಟು ಹೇಳ್ತ್ವಲಿ ಅದು ಹೆಚ್ಚಾಗಿ.
ನಾಗರಪಂಚಮಿ ದಿನ ಮಾಡ್ತ. ಹಲಸಿನ ಬೇಳೆಗೆ ಬೆಲ್ಲ ಹಾಕಿ ಬೇಯಿಸಿ, ರುಬ್ಬಿ, ಗುಂಡಗೆ ತಟ್ಟಿ ಕಾವಲಿ ಮೇಲೆ ಬೇಯಿಸ್ತ. ಸುಮಾರು 3 ಇಂಚು ವ್ಯಾಸ, 1/2 ಇಂಚು ದಪ್ಪ (approx)ಇರ್ತು :)
ಅಮ್ಮನ ಹತ್ರ ಹೇಳಿ ಮಾಡ್ಶ್ಗ್ಯಂಡು ತಿನ್ನು. ಚೊಲೋ ಇರ್ತು.
ಕುಶಾಲ್ ಮಾಡಲೆ ಯಾರಾರೂ ಸಿಕ್ಕಿರೆ ಅಂವ ಹಂಗೆಯ.. ಎಂತಕ್ಕೆ ಹಂಗೆ ಕರೀತಿದ್ದ ಅಂತ ಯಂಗೂ ಗೊತ್ತಿಲ್ಲೆ.. ಮುಂದಿನ್ ಸಲ ಹೋದಾಗ ಕೇಳ್ತಿ...
ಸುಕ್ಕುನುಂಡೆನೂ ಮಾಡಲೆ ಅಮ್ಮಂಗೆ ಹೇಳ್ತಿ..
@ ಹರೀಶ,
ಕೇಳಿದ ಮೇಲೆ ಯಂಗೂ ಹೇಳು ಮತ್ತೆ :)
Post a Comment