November 3, 2008

ಸಡಗರದಲ್ಲಿ … (ಉತ್ತರ ಕನ್ನಡದ ಗಾದೆ – 209 ಮತ್ತು 210)

ಸಡಗರದಲ್ಲಿ ಸರಸಕ್ಕ ಮೈನೆರೆದಿದ್ದಳು.
ಎಲ್ಲವೂ ಸರಿಯಾದಿದೆ ಎಂದುಕೊಂಡಾಗ ಏನೋ ಒಂದು ಕಿರಿಕಿರಿ ಆಗುವಂಥ ಸನ್ನಿವೇಶ ಎದುರಾದರೆ ಬಳಸಬಹುದು. ಉದಾಹರಣೆಗೆ ಎಲ್ಲ ಕೆಲಸ ಮುಗಿಸಿ ಗಡಿಬಿಡಿಯಲ್ಲಿ ಹೊರಡಲನುವಾದಾಗ ನೋಡಿದರೆ ಚಪ್ಪಲಿ ಕಿತ್ತು ಹೋಗಿರುತ್ತದೆ! ಇಂಥದೇ ಇನ್ನೊಂದು ಗಾದೆ- ಹೊತ್ತಲ್ಲದ ಹೊತ್ತಿನಲ್ಲಿ ತೊತ್ತು ಮೈನೆರೆದಿದ್ದಳು.

2 comments:

Harisha - ಹರೀಶ said...

ಶಿವಪೂಜೆಲ್ಲಿ ಕರಡಿಗೆ ಬಿಟ್ಟ ಹಾಗೆ - ಇದೇ ಕೆಟಗರಿಗೆ ಸೇರ್ತಾ?

Seema S. Hegde said...

@ ಹರೀಶ,
ಊಹೂಂ. ಅದು ಈ ಸಾಲಿಗೆ ಸೇರ್ತಿಲ್ಲೆ.