ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ (ಬಿಡಲಿಲ್ಲ).
ಶನೀಶ್ವರನ ಕಾಟದಿಂದ ತಪ್ಪಿಸಿಕೊಳ್ಳಬೇಕೆಂದು ಮನೆ ಬಿಟ್ಟು ರಾಮೇಶ್ವರಕ್ಕೆ ಹೋದರೂ ಶನೀಶ್ವರ ಅಲ್ಲಿಗೂ ಬಂದು ಕಾಡಿದ್ದನಂತೆ। ಯಾರಿಂದಲಾದರೂ ಅಥವಾ ಯಾವುದೋ ಒಂದು ಬೇಜಾರಾಗುವಂಥ ಕೆಲಸದಿಂದಲಾದರೂ ತಪ್ಪಿಸಿಕೊಂಡೆನಪ್ಪಾ ಎಂದುಕೊಳ್ಳುವಷ್ಟರಲ್ಲೇ ಅಂಥದೇ ವ್ಯಕ್ತಿ ಅಥವಾ ಅಂಥದೇ ಕೆಲಸ ಬಂದು ತಗಲಿಕೊಂಡರೆ ಹೇಳಿಕೊಳ್ಳಬಹುದು। ಒಂದು ತೊಂದರೆಯಿಂದ ತಪ್ಪಿಸಿಕೊಂಡು ಬೇರೆಲ್ಲೋ ಹೋದರೆ ಅಲ್ಲೂ ಕೂಡ ಅಂಥದೇ ತೊಂದರೆ ಎದುರಾದರೆ ಈ ಮಾತನ್ನು ನೆನಪಿಸಿಕೊಳ್ಳಿ.
ಶನಿ ಹಿಡಿದು ಸಂತೆಗೆ ಹೋದರೆ ಇಲಿ ಹಿಡಿದು ತಲೆ ಬೋಳಿಸಿತ್ತು ಅಂತ ಹೇಳ್ತಾರೆ ಅನ್ನೋದು ~ragu ಹೇಳಿದ ಮೇಲೆ ಗೊತ್ತಾಯಿತು. Thanks ~ragu :)
ಪಾಪಿ ಸಮುದ್ರ ಹೊಕ್ಕರೂ ಮೊಳಕಾಲು ನೀರು ಎನ್ನುವುದನ್ನು ಸ್ವಲ್ಪ ಬೇರೆ ಅರ್ಥದಲ್ಲಿ ಉಪಯೋಗಿಸುತ್ತಾರೆ....ಎಲ್ಲಿ ಹೋದರೂ ಅದೃಷ್ಟವೇ ಇಷ್ಟು ಎನ್ನುವಂಥ ಸಂದರ್ಭದಲ್ಲಿ.
4 comments:
ಗ್ರಾಮ್ಯವಾಗಿ ಇದನ್ನಾ, "ಶನಿಹಿಡಿದು ಸ೦ತೆಗೆ ಹೋದ್ರೆ ಇಲಿ ಹಿಡಿದು ತಲೆ ಬೋಳಿಸಿತ್ತು" ಅ೦ತಲೂ ಹೆಳ್ತಾರೆ.
ಚೆನ್ನಾಗಿದೆ.
@ ~ragu
ಈ ಗಾದೆಯನ್ನು ನಾನು ಇಲ್ಲಿಯವರೆಗೆ ಕೇಳಿಯೇ ಇರಲಿಲ್ಲ.
ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಈಗ ಅದು ನನ್ನ ಗಾದೆಗಳ ಪಟ್ಟಿಯಲ್ಲಿ ಸೇರಿ ಬೆಚ್ಚಗೆ ಕುಳಿತಿದೆ :)
"ಪಾಪಿ ಸಮುದ್ರ ಹೊಕ್ರೂ ಮೊಳಕಾಲುದ್ದ ನೀರು" & "ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ" ಕೂಡ ಇದ್ದು.. (ನಂಗೇ ಗೊತ್ತಿದ್ದು ಅಂದ್ಮೇಲೆ ಎಲ್ಲರಿಗೂ ಗೊತ್ತಿರ್ತು ಬಿಡು)
@ ಹರೀಶ,
ಮೊದಲನೆಯದು (ಪಾಪಿ....) ಹಾಕಿದ್ನಿಲ್ಲೆ.... ಎರಡನೆಯದು (ಹೋದ್ಯಾ...) ಮೊದ್ಲು ಯಾವಾಗಲೋ ಹಾಕಿದ್ದಿ.
ಆದ್ರೆ ಈ ಮೂರೂ (ರಾಮೇಶ್ವರಕ್ಕೆ.. ಕೂಡಾ ಸೇರಿಸಿ) ಗಾದೆಗಳು ಬೇರೆ ಬೇರೆ ಸಂದರ್ಭದಲ್ಲಿ ಬಳಕೆಯಾಗ್ತ.
ನಿಂಗೆ ರಾಶಿ ಗಾದೆ ಗೊತ್ತಿದ್ದು ಬಿಡು.
Post a Comment