October 24, 2008

ಹೇಳೋದ್ರಲ್ಲೇ ಕಾಶಿ … (ಉತ್ತರ ಕನ್ನಡದ ಗಾದೆ – 203, 204 ಮತ್ತು 205)

ಹೇಳೋದ್ರಲ್ಲೇ ಕಾಶಿ ಕಂಡ ತಿನ್ನೋದೆಲ್ಲಾ ಮಶಿಕೆಂಡ.
ಯಾವಾಗ ನೋಡಿದರೂ ಹೇಳುವುದು ಕಾಶಿಯ ಪುರಾಣವನ್ನೇ, ಆಚಾರ- ವಿಚಾರಗಳ ಬಗ್ಗೆ ಆದರೆ ತಾನು ಮಾತ್ರ ಅದ್ಯಾವುದನ್ನೂ ಪಾಲಿಸದೇ ಬದುಕುತ್ತಾನೆ. ಅನಾಚಾರಗಳನ್ನೇ ಮಾಡುತ್ತಾನೆ. ಯಾರಾದರೂ ಬೇರೆಯವರಿಗೆ ಬುದ್ಧಿವಾದಗಳನ್ನು, ಸರಿ- ತಪ್ಪುಗಳ ಬಗ್ಗೆ, ಹೇಳಿ ನಂತರ ತಾವೇ ತಪ್ಪು ಹಾದಿಯಲ್ಲಿ ನಡೆದಾಗ ಅಂಥವರ ಬಗ್ಗೆ ಹೇಳುವಂಥ ಮಾತು ಇದು.
ಪುರಾಣ ಹೇಳೋಕೆ ಬದನೇಕಾಯಿ ತಿನ್ನೋಕೆ ಅಂತ ಕೂಡ ಉಪಯೋಗಿಸೋದುಂಟು.
ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ- ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ.

6 comments:

Unknown said...

ಸೀಮಕ್ಕಾ, ನಮ್ಮೆನೇಲಿ ಇದು ಬಹಳ ಸಲ ಕೇಳಿಸ್ತಿತ್ತು. ಅಮ್ಮನ ಫೇವರೇಟ್ ಗಾದೆಗಳಲ್ಲಿ ಒಂದು. ನಂದೂವಾ. ಥ್ಯಾಂಕ್ಸ್!

Seema S. Hegde said...

@ Madhusoodana,

:)
Thanks a lot.

shivu.k said...

ಈ ಗಾದೆ ನೂರಕ್ಕೆ ನೂರರಷ್ಟು ನಿಜ. ಇದೆ ಗಾದೆ ನಮ್ಮಲ್ಲಿ ಈ ರೀತಿ ಇದೆ.
ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ!
ಶಿವು.ಕೆ

Seema S. Hegde said...

@ ಶಿವು,
ಧನ್ಯವಾದಗಳು :)

Harisha - ಹರೀಶ said...

ಇಂಥಾದ್ದೆ ಇನ್ನೊಂದೆಂತೋ ಇದ್ದು.. ಈರುಳ್ಳಿನ ಬದನೇಕಾಯಿನ ಎಂತೋ ಇದ್ಹಂಗಿದ್ದಪ್ಪ.. ಅಪ್ಪ ಹೇಳ್ತಿರ್ತ.. ಗೊತ್ತಿದ್ರೆ ಹಾಕು

Seema S. Hegde said...

@ ಹರೀಶ,
ಹೌದು ಇದ್ದು. ಈರುಳ್ಳಿ ಅಲ್ಲ... "ಪುರಾಣ ಹೇಳೋಕೆ ಬದನೇಕಾಯಿ ತಿನ್ನೋಕೆ" ಹೇಳಿ.
ಹಾಕ್ತಿ ತಗ ಅದನ್ನೂ ಕೂಡ :)