ಗಂಡ ಸತ್ತ ದುಃಖವಲ್ಲದೇ, ಬಡ್ದು ಕೂಪಿನ ಉರಿ ಬೇರೆ.
ಗಂಡ ಸತ್ತ ದುಃಖದ ಜೊತೆಗೇ ಬಡ್ದು ಕೂಪಿನ ಉರಿಯನ್ನೂ ಸಹಿಸಿಕೊಳ್ಳಬೇಕು.
ಎಂಥ ನೋವು ತುಂಬಿರುವ ಗಾದೆ ಇದು. ಹಿಂದಿನ ಕಾಲದಲ್ಲಿ ಗಂಡ ಸತ್ತ ಹೆಂಗಸಿಗೆ ತಲೆ ಕೂದಲನ್ನು ಪೂರ್ತಿಯಾಗಿ ಬೋಳಿಸಿಬಿಡುತ್ತಿದ್ದರು- ಅಮಾನವೀಯವಾಗಿ. ಆದರೆ ಹೆಂಡತಿ ಸತ್ತ ಗಂಡಸಿಗೆ ಹದಿನೈದನೆಯ ದಿನ ಮುಗಿದ ತಕ್ಷಣ ಮರುಮದುವೆಯ ವಿಚಾರ ಮಾಡುತ್ತಿದ್ದರು! ಡುಂಡಿರಾಜರ ಒಂದು ಹನಿಗವನ ನೆನಪಾಗುತ್ತಿದೆ.
ಗಂಡ ಸತ್ತರೆ ಹೆಂಡತಿಯಾಗುತ್ತಾಳೆ
ವಿಧವೆ.
ಹೆಂಡತಿ ಸತ್ತರೆ ಗಂಡ ಆಗುತ್ತಾನೆ
ಮದುವೆ!
ಗಂಡನನ್ನು ಕಳೆದುಕೊಂಡ ಹೆಂಗಸು ಆ ದುಃಖದ ಜೊತೆಗೇ ಹಜಾಮನ ಬಡ್ದು ಕೂಪಿನ ಉರಿಯನ್ನೂ ಸಹಿಸಿಕೊಳ್ಳಬೇಕು ಎಂಬುದು ಅರ್ಥ. ನಾನು ಒಂದು ಕಷ್ಟದಲ್ಲಿ ಆಗಲೇ ಸಿಕ್ಕಿ ಬಿದ್ದಿರುವಾಗಲೇ ಇನ್ನೊಬ್ಬರು ನಮಗೆ ನೋವಾಗುವಂಥ ಮಾತನಾಡಿದಾಗ ಬಳಸಬಹುದು. ಗಾಯದ ಮೇಲೆ ಬರೆ ಎಳೆದಂತೆ ಎನ್ನುವುದು ಇದಕ್ಕೆ ಹತ್ತಿರದ ಗಾದೆ.
ನಾನು ಇದನ್ನು ಮೊತ್ತ ಮೊದಲನೆಯ ಬಾರಿಗೆ ಕೇಳಿದ್ದು - ಅಮ್ಮ ಅಕಸ್ಮಾತ್ ಕೈತಪ್ಪಿ ತುಪ್ಪದ ಪಾತ್ರೆಯನ್ನು ಬೀಳಿಸಿಕೊಂಡು ಕಿರಿಕಿಯಲ್ಲಿದ್ದಾಗ ಅಡುಗೆ ಮನೆಗೆ ಬಂದ ಅಪ್ಪ ಸ್ವಲ್ಪ ನಿಧಾನಕ್ಕೆ ಮಾಡಬೇಕಿತ್ತು ಎಂದು ಗುರ್ರ್... ಎಂದಾಗ.
8 comments:
ಇದು ಅಪ್ಪನ ಫೇವರಿಟ್ ಗಾದೆ!
@ ಹರೀಶ,
ಪ್ರತಿಯೊಬ್ಬರಿಗೂ ಒಂದೊಂದು favourite ಗಾದೆ ಇರ್ತಗರವು ಅಲ್ದಾ?
ನಿನ್ನ favourite ಗಾದೆ ಯಾವ್ದು? :)
ನಂಗೆ ಅಂಥ ಫೇವರಿಟ್ ಯಾವ್ದೂ ಇಲ್ಲೆ.. ನಂಗೆ ಕನ್ನಡ ಗಾದೆಗಳಿಗಿಂತ ಸಂಸ್ಕೃತ ಸುಭಾಷಿತಗಳು ಇಷ್ಟ
@ ಹರೀಶ,
ಸುಭಾಷಿತ ಅಂದ್ರೆ ಯಂಗೂ ಇಷ್ಟ.
ಎಷ್ಟು meaningful ಇರ್ತು ಅಲ್ದಾ?
good one. chikka hagoo chokka.
mattondu gaade nenapaguttide
"kunilarada sooLege angaLa donku"
@ Krishna Bhat,
Thanks.Adre aa gaade tamage illi yaake nenapige bantu anta gottagalilla...aa gaadeyallenoo visheshateyilla...ellarigoo gottiruvantha haleya gaade.
Adene irali, thanks.
~= ಗಾಯದ ಮೇಲೆ ಬರೆ ಎಳೆದಂತೆ
@ Harsha,
Thanks :)
Neevu heliddu sari.
Post a Comment