October 10, 2008

ಕೊಟ್ಟ ಸಾಲ … (ಉತ್ತರ ಕನ್ನಡದ ಗಾದೆ – 201)

ಕೊಟ್ಟ ಸಾಲ ಕೇಳದೆ ಹೋಯಿತು, ಮಾಡಿದ ಬದುಕು ನೋಡದೆ ಹೋಯಿತು.
ಕೊಟ್ಟ ಸಾಲ ಕೇಳದೆ ಹೋಯಿತು- ಕೆಲವರಿಗೆ ಒಂದು ಕೆಟ್ಟ ಚಟವಿರುತ್ತದೆ. ಸಾಲ ತೆಗೆದುಕೊಂಡಮೇಲೆ ಅದನ್ನು ಕೊಟ್ಟವನು ಮತ್ತೆ ಮತ್ತೆ ಕೇಳುವ ತನಕ ಹಿಂದಿರುಗಿಸುವ ಅಭ್ಯಾಸವಿರುವುದಿಲ್ಲ. ಅಂಥವರ ಬಳಿ ಕೇಳದೆ ಇದ್ದರೆ ಸಾಲವಾಗಿ ಕೊಟ್ಟ ಹಣ ಯಾವತ್ತೂ ಮರಳಿ ಸಿಗುವುದಿಲ್ಲ.
ಮಾಡಿದ ಬದುಕು ನೋಡದೆ ಹೋಯಿತು- ಸಾಮಾನ್ಯವಾಗಿ ಮದುವೆ ಮುರಿದು ಬೀಳುವ ಹಂತಕ್ಕೆ ಬಂದು ತಲುಪಿದರೆ ಹೇಳುವ ಮಾತು. ಬರಿದೆ ಮದುವೆಯಾದರೆ ಸಾಲದು, ಅದನ್ನು ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ಮಾಡಿಕೊಂಡ ಬದುಕನ್ನು ತಿರುಗಿ ನೋಡದೆ ಇದ್ದರೆ ಹಾಳಾಗ ಹೋಗುತ್ತದೆ ಎನ್ನುವ ಅರ್ಥ.


ಸಾಲವನ್ನು ತಿರುಗಿ ಕೇಳುವ ಸಮಯದಲ್ಲಿ ಅಥವಾ ಗಂಡ ಹೆಂಡಿರ ಸಂಬಂಧದಲ್ಲಿ (ನಿರ್ಲಕ್ಷ್ಯದಿಂದಾಗಿ ) ಬಿರುಕುಂಟಾದಾಗ ಈ ಮಾತನ್ನು ಹೇಳುತ್ತಾರೆ.

5 comments:

Santhosh Rao said...

ella ghade chennagide :)

Veda sulladaru, gaade sullagadu anno maatu saha gaade tane :(

Ittigecement said...

ರಾಶಿ ಚೊಲೊ ಇದ್ದು.. ಎನ್ನ ಆಯಿ ಇವತ್ತೊಂದು ಗಾದೆ ಹೇಳಿದ್ದು ಕೇಳು..
ಬರಗಾಲ ಆರು ತಿಂಗಳ..
ಬರಗಾಲದ ಮಾತು ಅನುಗಾಲ..

Seema S. Hegde said...

@ ಸಂತೋಷ,
ಧನ್ಯವಾದಗಳು :)
ಆ ಗಾದೆ ಕೂಡ ಹಿಂದೊಮ್ಮೆ ಹಾಕಿದ್ದೇನೆ ಅಂತ ನೆನಪು.
ಮತ್ತೆ ಬರುತ್ತಿರಿ.

@ ಸಿಮೆಂಟು ಮರಳಿನ ಮಧ್ಯೆ,
ಇದೊಂದು ಹೊಸ ಗಾದೆ. ಯನ್ನ list ನಲ್ಲಿ ಇತ್ತಿಲ್ಲೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಆದ್ರೆ ಅದ್ರ ಸರಿಯಾದ ಅರ್ಥ ಗೊತ್ತಾಗ್ತಾ ಇಲ್ಲೆ. ಬರಗಾಲ ಆರು ತಿಂಗಳು ಮಾತ್ರ ಆದ್ರೂವ ಅದ್ರ ಪರಿಣಾಮ ತುಂಬಾ ದಿನ ಇರ್ತು ಹೇಳ? ಅಥವಾ ಬರಗಾಲವನ್ನ ಕೇವಲ ಆರು ತಿಂಗಳು ಅನುಭವಿಸಿ ಅದನ್ನ ಯಾವಾಗಲೂ ಹೇಳುವ ತರದಲ್ಲಿ ಹೆಲ್ಕ್ಯತ್ತಾ ಇರ್ತ ಹೇಳ?....ವಿವರಿಸಿದರೆ ಚೊಲೋ ಆಗ್ತಿತ್ತು.

Ittigecement said...

ಬರಗಾಲ ಹೆಚ್ಚೆಂದರೆ ಮಳೆಗಾಲ ಬರುವ ತನಕ. ಆದರೆ ಅಂಥಹ ಸಮಯದಲ್ಲಿ ಜನರು ಆಡಿದ ಮಾತು ಅನುಗಾಲವೂ ನೆನಪಿರುತ್ತದೆ. ಇದು ತಾತ್ಪರ್ಯ.

೧) ಮನೆಯಲ್ಲಿ ಗಲಾಟೆ ಹೇಳಿ ಮಂಜುಗುಣಿ ತೇರಿಗೆ ಹೋಗಿದ್ನಡಾ...
೨) ಅಮ್ಮಚ್ಚಿ ಗೋವಿಂದ ಕೊಳ್ಗಿಬೀಸಿಗೆ ಹೋಗಿ ಬಂದಾಂಗೆ...

ಊರಿಗೆ ಹೋದಾಗ ಹಿರಿಯರನ್ನ ಮಾತಡ್ಸು ನಿನ್ನ ಬ್ಲೊಗ್ ತುಂಬಿ ಹೊಗುವಷ್ಟು ಹೇಳ್ತ...

Seema S. Hegde said...

@ ಸಿಮೆಂಟು ಮರಳಿನ ಮಧ್ಯೆ,
ಒಹ್ ಹಾಂಗ ಅದ್ರ ಅರ್ಥ? ಧನ್ಯವಾದಗಳು ವಿವರಿಸಿದ್ದಕ್ಕೆ :)
ಉಳಿದೆರಡು ಗಾದೆಗಳಲ್ಲಿ ಮೊದಲನೆಯದು ಈಗಾಗಲೇ ಹಾಕಿಗಿದಿ, ಎರಡನೆಯದು hit-list ನಲ್ಲಿ ಇದ್ದು! :P