October 6, 2008

ಭಟ್ಟರ ಅಂಗವಸ್ತ್ರ … (ಉತ್ತರ ಕನ್ನಡದ ಗಾದೆ – 199)

ಭಟ್ಟರ ಅಂಗವಸ್ತ್ರ ಆಗಬಾರದು, ವೈದ್ಯನ ಹೆಂಡತಿ ಆಗಬಾರದು.
ಅಡುಗೆ ಭಟ್ಟರ ಹೆಗಲ ಮೇಲಿರುವ ಅಂಗವಸ್ತ್ರದ ಪಾಡು ಯಾರಿಗೂ ಬೇಡ. ಕಂಡ ಕಂಡದ್ದನ್ನೆಲ್ಲಾ ಒರೆಸಲು, ಬಿಸಿ ಪಾತ್ರೆ ಒಲೆಯಿಂದ ಇಳಿಸಲು ಮೊದಲಾದ ಕೆಲಸಕ್ಕೆಲ್ಲಾ ಅದರ ಪ್ರಯೋಗ. ಅಂತೆಯೇ ವೈದ್ಯ ಕೂಡ ಎಲ್ಲಾ ಔಷಧಗಳನ್ನೂ ಹೆಂಡತಿಯ ಮೇಲೆಯೇ ಮೊದಲು ಪ್ರಯೋಗಿಸುತ್ತಾನೆ. ಅವರಿಬ್ಬರ ಬದುಕೂ ಕೂಡ ಕಷ್ಟ. (ಅಂಗವಸ್ತ್ರಕ್ಕೂ ಕೂಡ ಜೀವ ಇದೆ ಎಂದುಕೊಂಡರೆ!)

6 comments:

Jagali bhaagavata said...

ಡಾಕ್ಟರ ಹೆಂಡತಿಯಾಗಬೇಡ...ಡಾಕ್ಟರೇಟಳ ಗಂಡನಾಗಬೇಡ :-))ಹೆಂಗೆ? ಹ್ಹ ಹ್ಹ ಹ್ಹ

Jagali bhaagavata said...

ಸುಮ್ನೆ ಕಾಲೆಳೆಯಿಂಗ್. ಬೇಜಾರು ಮಾಡ್ಕಳಲಾಗ.

jomon varghese said...

ಹಹಹಹಹಹಹಹ..... ಚೆನ್ನಾಗಿದೇರಿ..

ಈ ಭಾಗವತರು ಯಾರ ಕಾಲು ಎಳೆಯಲಿ ಅಂತಾ ಇಡಿ ಬ್ಲಾಗಮಂಡಲು ಸುತ್ತುತ್ತಿರುತ್ತಾರೆ.

Seema S. Hegde said...

@ ಜಗಲಿ ಭಾಗವತ,
ಭಾಗವತರು ಮುಂದೊಂದು ದಿನ ನನ್ನೆದುರಿಗೆ ಬಂದಾಗ ಕೈಗೆಟುಕದಿದ್ದರೆ ಏಣಿ ಹಾಕಿಕೊಂಡಾದರೂ ಕಿವಿ ಹಿಂಡುತ್ತೇನೆ. ಸುಮ್ನೆ ಕಾಲೆಳೆಯಿಂಗ್. ಬೇಜಾರು ಮಾಡ್ಕಳಲಾಗ :)


@ ಜೋಮನ್,
ಥ್ಯಾಂಕ್ಸ್ ಕಣ್ರೀ. ನಿಜ ನೀವು ಹೇಳಿದ್ದು :)

krbabu said...

ಇದು ಈ ಕಾಲದಲ್ಲೂ ಅನ್ವಯಿಸುತ್ತದೆಯೇ? ಮುಖ್ಯವಾಗಿ, ವೈದ್ಯನ ಹೆಂಡತಿ ...

Seema S. Hegde said...

@ ರಮೇಶ ಬಾಬು,
ನೀವು ಹೇಳಿದ್ದು ನಿಜ. ಈಗಿನ ಕಾಲದಲ್ಲಿ ವೈದ್ಯರುಗಳು ತಮ್ಮ ಹೆಂಡತಿಯರ ಮೇಲೆ ಔಷಧಗಳ ಪ್ರಯೋಗ ಮಾಡುವುದಿಲ್ಲ ಏಕೆಂದರೆ ಪ್ರತಿಯೊಂದು ರೋಗಕ್ಕೂ ಒಬ್ಬ specialist ಇದ್ದೆ ಇರುತ್ತಾರೆ. ಹಾಗಾಗಿ ಇದು ಈಗಿನ ಕಾಲಕ್ಕೆ ಅನ್ವಯವಾಗುವುದಿಲ್ಲ; ಆದರೆ ಹಳ್ಳಿಗಳಲ್ಲಿರುವ ಆಯುರ್ವೇದದ ವೈದ್ಯರುಗಳು ಇನ್ನೂ ಈ ರೂಢಿಯನ್ನು ಬಿಟ್ಟಿಲ್ಲ.