September 15, 2008

ನಿನ್ನೆ ಬೆಳಿಗ್ಗೆ ನಾನು

ನಿನ್ನೆ ಬೆಳಿಗ್ಗೆ...

ರಾಜೀವ- “ಎಷ್ಟು ಘಂಟೆಗೆ ಹೊರಡೋಣ? ನಿನಗೆ ಒಮ್ಮೆ ಕೆಸಲ ಮುಗಿಸಿ ಎಷ್ಟು ಘಂಟೆಗೆ ಹೊರಡಲಿಕ್ಕೆ ಆಗುತ್ತದೆ?”

ನಾನು- “ನೀನು ಆಗ Japanese class ಮುಗಿಸಿಕೊಂಡು ಬರುವಷ್ಟರಲ್ಲಿ ಊಟ ತಯಾರಾಗಿ ಇರುತ್ತಿತ್ತು.....ಅದೇ ಈಗ ನಾನು ಬರುವಷ್ಟರಲ್ಲಿ? ಗಲೀಜಾಗಿರುವ ಮನೆ, ಅಲ್ಲಲ್ಲಿ ಬಿದ್ದು ಒದ್ದಾಡುತ್ತಿರುವ ವಸ್ತುಗಳು, ಅಡುಗೆಮನೆ ಎಲ್ಲವೂ ಕಾಯುತ್ತಿರುತ್ತವೆ..... ನೀನು ಬಾಲ್ಕನಿಯಲ್ಲಿ ಬಿಸಿಲಿಗೆ ಬಾಡಿ ಹೋಗುತ್ತಿರುವ ಗಿಡಕ್ಕೆ ನೀರೂ ಕೂಡ ಹಾಕದೆ ಹಾಯಾಗಿ ಅದ್ಯಾವುದೋ ಸುಡುಗಾಡು English movie ನೋಡುತ್ತಿರುತ್ತೀಯ...

ನೀನು ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಬಿಸಿ ಬಿಸಿ ಅಡುಗೆ..... ಅದೇ ನಾನು ಕೆಲಸದಿಂದ ಬರುವಷ್ಟರಲ್ಲಿ?...

ನಿನಗಾದರೆ weekend ಅಂದರೆ ನಿಜವಾಗಿಯೂ weekend ಇದೆ- relax ಮಾಡಲಿಕ್ಕೆ... ಆದರೆ ನನ್ನ ಕೆಲಸಕ್ಕೆ weekend ಅನ್ನುವುದು ಇಲ್ಲವೇ ಇಲ್ಲ…..

ನಾನಂತೂ ಮುಂದಿನ ಜನ್ಮವೊಂದಿದ್ದರೆ ಹೆಣ್ಣು ಸೊಳ್ಳೆಯಾಗಿಯೂ ಕೂಡ ಹುಟ್ಟುವುದಿಲ್ಲ....."

ರಾಜೀವ- “????!!!!”


7 comments:

ವಿ.ರಾ.ಹೆ. said...

ಸೇಮ್ ಡೈಲಾಗು ನನ್ ಅಮ್ಮಂದು.

ನಿಮ್ಗೆಲ್ಲ ರಜ ಅಂದ್ರೆ ರಜ ಇರ್ತು. ಆರಾಮಾಗಿ ಒಂದು ಕಡ್ಡಿ ಕೆಲಸ ಮಾಡದೇ ಬಿದ್ಕಂಡಿರ್ತೀರ. ನಮ್ಗೆ ಮಾತ್ರ ಜೀವನ ಪೂರ್ತಿ ರಜ ಅನ್ನದೇ ಇಲ್ಲೆ. ಅದೂ ಇದೂ.. :)

Harisha - ಹರೀಶ said...

ಇದೆಂತದೆ ಸೀಮಕ್ಕಾ... ಚಂಡೀ ಅವತಾರ ಮೈ ಮೇಲೆ ಬಂದ ಹಂಗೆ ಕಾಣ್ತು...

Jagali bhaagavata said...

ಈಗ ರಾಜೀವ ಭಾವ ಹೇಗಿದ್ದಾರೆ? ಹುಷಾರಾಗಿದ್ದಾರ?

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕಾ...
:-) ಚೊಲೊ ಬರದ್ದೆ, ನೀ ಹೇಳಿದ್ದು ಖರೆ ಹೌದು...
ನನಗೂ ಹಂಗೆ ಅನಿಸ್ತು ಒಂದೊಂದ್ಸಲ.

Seema S. Hegde said...

@ ವಿಕಾಸ,
ಎಲ್ಲರ ಅಮ್ಮಂದಿರದ್ದೂ ಅದೇ dialogue.
ಅಮ್ಮ ಹೇಳಿದ್ದು ಹೌದ-ಅಲ್ದ ಹೇಳಿ ವಿಚಾರ ಮಾಡಿದ್ದೆ ಅಲ್ದ? :)

@ ಹರೀಶ,
ಹಿಂಗೆ ಒಂದೊಂದು ಸಲ change ಇರ್ಲಿ ಹೇಳಿ... :P
ಆದ್ರೆ ಎಷ್ಟು ಚಂಡಿ ಅವತಾರ ಮಾಡಿದರೂ ಅಷ್ಟೇ, ಕಾಳಿ ಅವತಾರ ಮಾಡಿದರೂ ಅಷ್ಟೇ...
ಬಡವನ ಸಿಟ್ಟು ದವಡೆಗೆ ಮೂಲ :(

@ ಜಗಲಿ ಭಾಗವತ,
ಎಂಥ ದುರ್ಬುದ್ಧಿ ನಿಮಗೆ ಅಂತೀನಿ...:P
ಕೆಲಸ ಮಾಡಿ ಸೋತು ಹೋದ್ಯಾ ಸೀಮಕ್ಕ ಅನ್ನಲಿಲ್ಲ... ರಾಜೀವ ಭಾವ ಹೇಗಿದ್ದಾರೆ ಅಂತ ಕೇಳ್ತಾ ಇದ್ದೀರಾ...
ಹಣ್ಣು, ಬ್ರೆಡ್ಡು, ಎಳೆನೀರು ತಗೊಂಡು ಆಸ್ಪತ್ರೆಗೇ ಹೋದ್ರೇನೋ ರಾಜೀವ ಭಾವನನ್ನು ಹುಡುಕಿಕೊಂಡು ಅಂದುಕೊಂಡೆ! ನಾನೇನೂ ಹೊಡೆದಿಲ್ಲ ಅವರಿಗೆ...ಚೆನ್ನಾಗಿಯೇ ಇದ್ದಾರೆ :)ಬರೀ ಗೊಣಗಾಡಿದ್ದು ಮಾತ್ರ...ನಿಮಗೆ ಗೊತ್ತಲ್ಲ; ಬೊಗಳೋ ನಾಯಿ ಕಚ್ಚೋದಿಲ್ಲ ಅಂತ ;)

@ ಶಾಂತಲಾ,
ಹೆಂಗಸರ ಸಮಸ್ಯೆ ಹೆಂಗಸರಿಗೆ ಮಾತ್ರ ಅರ್ಥ ಆಗ್ತು ಹೇಳಿ ಇಲ್ಲಿ prove ಆತು ನೋಡು.ಬಹುಶ ಎಲ್ಲಾ ಹೆಂಗಸರಿಗೂ ಒಂದಲ್ಲಾ ಒಂದು ದಿನ ಇದು ಅನಿಸಿಯೇ ಅನಿಸ್ತು ಕಾಣ್ತು.
ನೀನಾದ್ರೂ ಯನ್ನ ಕಡೆ ಇದ್ಯಲೇ... ಸಾಕು ಬಿಡು. Thanks a lot :)

hEmAsHrEe said...

seema avare,
koogaadi maadidre enoo prayojana illa.
taalmeyinda, preetiyinda kelasa maadiskobeku.
learn some techniques.
Joking!!!!!!

hemashree
www.smilingcolours.blogspot.com

Seema S. Hegde said...

@ ಹೇಮಶ್ರೀ,
ನಾನು ಕೂಗಾಡಿರಲಿಲ್ಲ, ಆದರೆ ಗೊಣಗಾಡಿದ್ದು ನಿಜ.
ನಿಮ್ಮ joke ಎಂದು ಹೇಳಿದ್ದರ ಬಗ್ಗೆ serious ಆಗಿ ವಿಚಾರ ಮಾಡ್ತಾ ಇದ್ದೀನಿ :)