ಕದ್ದ ರೊಟ್ಟಿ ಬೇರೆ, ದೇವರ ಪ್ರಸಾದ ಬೇರೆ.
ಕದ್ದ ರೊಟ್ಟಿ ಮಾತ್ರವಲ್ಲದೇ ದೇವರ ಪ್ರಸಾದವನ್ನೂ ಪಡೆದುಕೊಳ್ಳುತ್ತಾನೆ ಎಂದು ಅರ್ಥ. ಕದ್ದು ರೊಟ್ಟಿಯನ್ನು ತಿಂದಿರುವುದಲ್ಲದೆ, ಏನೂ ತಿಳಿಯದವರಂತೆ ನಟಿಸಿ ದೇವರ ಪ್ರಸಾದವನ್ನು ಎಲ್ಲರೆದುರಿಗೇ ತೆಗೆದುಕೊಂಡು ತಿನ್ನುತಾನೆ.
ಅನ್ಯ ಮಾರ್ಗದಲ್ಲಿ ಲಾಭ ಮಾಡಿಕೊಳ್ಳುವುದರ ಜೊತೆಗೇ ಸಂಭಾವಿತನಂತೆ ನಟಿಸುತ್ತಾ ಸಹಜವಾಗಿ ಬರುವ ಲಾಭವನ್ನೂ ತೆಗೆದುಕೊಳ್ಳುತ್ತಾನೆ. ಇಂದಿನ ಅಧಿಕಾರಿಗಳು, ರಾಜಕಾರಣಿಗಳು ಇವರೆಲ್ಲರನ್ನು ಕುರಿತು ಹಿಂದೆಂದೋ ರೂಪಿಸಿಟ್ಟ ಗಾದೆ!
4 comments:
ಇಂದಿನ ಅದಿಕಾರಿಗಳು, ರಾಜಕಾರಣಿಗಳು? ಇಂತವರು ಯಾವ ಕಾಲದಲ್ಲೂ ಇದ್ದರು ಅಂತ ನನ್ನ ಅನಿಸಿಕೆ, ಬಹುಷಃ ಅಂದು ಅವರ ಸಂಖ್ಯೆ ಕಡಿಮೆ ಇದ್ದಿರಬಹುದು ಅಷ್ಟೆ, ಇಂದು ಹೆಚ್ಚಾಗಿದೆ.
@ ಪಾಪಣ್ಣ,
ಹೌದು. ಅಂಥವರ ಸಂಖ್ಯೆ ಕಡಿಮೆ ಇದ್ದಿರಬಹುದು ಹಿಂದಿನ ಕಾಲದಲ್ಲಿ. ಈಗಂತೂ ಅವರನ್ನೇ ಎಡವಿ ಬೀಳಬೇಕು ಅಷ್ಟಾಗಿಬಿಟ್ಟಿದೆ ಅವರ ಸಂಖ್ಯೆ; ಪ್ರಾಮಾಣಿಕರು ಯಾರು ಎಂದು ಹುಡುಕಿ ತೆಗೆಯಬೇಕು :(
ಸೀಮಾ ಅವರೆ,
ಕದ್ದ ರೊಟ್ಟಿ ಬೇರೆ, ದೇವರ ಪ್ರಸಾದ ಬೇರೆ, ಎಂಬುದನ್ನು ಕದ್ದ ವಸ್ತುವೇ ಬೇರೆ, ದೇವರು ದಯಪಾಲಿಸಿದ ವಸ್ತುವೇ ಬೇರೆ (ಪ್ರಸಾದ ಎಂಬುದನ್ನು ದೇವರ ಕೃಪೇ ಎಂದೂ ಅರ್ಥೈಸಬಹುದಲ್ಲವೇ), ಅಂದರೆ ಕದ್ದ ವಸ್ತುವಿಗಿಂತ ದೇವರು ಕೊಟ್ಟದ್ದು ಮೇಲು ಎಂದೂ ಅರ್ಥೈಸಬಹುದೇನೋ.ಇತರರ ವಸ್ತುವಿಗೆ ಆಸೆ ಪಡುವುದಕ್ಕಿಂತ ನಮ್ಮಲ್ಲಿರುವುದರಲ್ಲೇ ತೃಪ್ತಿಯಾಗಿರ ಬೇಕು ಎಂದೂ ಗಾದೆ ಹೇಳುತ್ತಿರಬಹುದಲ್ಲವೆ.
ಸರಳವಾದ ಮತ್ತು ಸುಂದರವಾದ ಈ ಗಾದೆಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
-ಬಾಲ
@ ಬಾಲವನ,
ಇದರ ಅರ್ಥ ಹಾಗಲ್ಲ; ನಾನು ಕೇಳಿರುವ ಪ್ರಕಾರ.
ಕದ್ದ ರೊಟ್ಟಿಯಲ್ಲದೇ ದೇವರ ಪ್ರಸಾದವನ್ನೂ ಗಿಟ್ಟಿಸಿಕೊಳ್ಳುತ್ತಾನೆ ಎಂದು. ರೊಟ್ಟಿಯಲ್ಲದೇ, ಮೇಲಿಂದ ದೇವರ ಪ್ರಸಾದವೂ ಸಿಗುತ್ತದೆ.
ಭೇಟಿ ನೀಡಿ ಪ್ರೋತ್ಸಾಹಿಸಿದ್ದಾಕ್ಕೆ ಧನ್ಯವಾದಗಳು.
ಬರುತ್ತಿರಿ :)
Post a Comment