September 24, 2008

ಕದ್ದು ಹೋಳಿಗೆ ಕೊಟ್ಟರೆ … (ಉತ್ತರ ಕನ್ನಡದ ಗಾದೆ – 195)

ಕದ್ದು ಹೋಳಿಗೆ ಕೊಟ್ಟರೆ ಬೆಲ್ಲ ಸಾಲದು ಎಂದಿದ್ದಳು.
ನಮ್ಮ ಕೈಮೀರಿ ಅಥವಾ ಅನ್ಯ ಮಾರ್ಗದಲ್ಲಿ ಹೋಗಿಯಾದರೂ ಇನ್ನೊಬ್ಬರಿಗೆ ಸಹಾಯ ಮಾಡಿದಾಗ ಅವರು ಉಪಕಾರವನ್ನು ಸ್ಮರಿಸುವ ಬದಲು ಉಪಕಾರ ಮಾಡಿದ್ದು ಸಾಲದು ಎಂದು ಹೇಳಿದರೆ ಅಥವಾ ಇನ್ನೂ ಬೇರೆ ರೀತಿಯಲ್ಲಿ ಉಪಕಾರವನ್ನು ನಿರೀಕ್ಷಿಸಿದರೆ ಬಳಸಬಹುದು.

4 comments:

ಮನಸ್ವಿನಿ said...

ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಸಾಲದಾ? ಅಥವಾ ತುಪ್ಪ ಸಾಲದಾ?

Seema S. Hegde said...

@ ಮನಸ್ವಿನಿ,
.......... ಬೆಲ್ಲ ಸಾಲದು. ಹೋಳಿಗೆಗೆ ಸಿಹಿ (ಬೆಲ್ಲ) ಕಡಿಮೆ ಅಂತ. ಮಾಡಿದ ಉಪಕಾರದಲ್ಲಿ ತಪ್ಪು ಹುಡುಕುವವರ ಬಗ್ಗೆ.

ವಿ.ರಾ.ಹೆ. said...

ಧರ್ಮಕ್ಕೆ ದನ ಕೊಟ್ಟರೆ ಹಲ್ಲು ಎಣಿಸಿದ್ದನಂತೆ ;)

Seema S. Hegde said...

@ ವಿಕಾಸ,
"ದಾನಕ್ಕೆ ಬಂದ ಎಮ್ಮೆಯ ಹಲ್ಲು ಹಿಡಿದು ನೋಡಿದ್ದನಂತೆ." ಮೊದ್ಲು ಹಾಕಿದ್ದಿ. ಗಾದೆ ಸಂಖ್ಯೆ 84 ನೋಡು :-)
ಬೆಂಗಳೂರು ಕಡೆ "ಬಿಟ್ಟಿಯಾಗಿ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದ್ದನಂತೆ" ಅಂತ ಹೇಳ್ತ