August 22, 2008

ಹೆಣ ಹೊರುವವನಿಗೆ … (ಉತ್ತರ ಕನ್ನಡದ ಗಾದೆ – 186)

ಹೆಣ ಹೊರುವವನಿಗೆ ಏನೋ ಭಾರವಾ?
'ಏನೋ' ಎನ್ನುವುದನ್ನು ನಿಮ್ಮ ಊಹೆಗೆ ಬಿಡುತ್ತೇನೆ. ಅಥವಾ ಬೇರೆ ಯಾರಿಗಾದರೂ ಗೊತ್ತಿದ್ದರೆ ಕೇಳಿಕೊಳ್ಳಿ!
ಪೂರ್ತಿ ಹೆಣವನ್ನೇ ಹೊರುತ್ತಿದ್ದಾಗ 'ಏನೋ' ಭಾರವಾಗುವುದಿಲ್ಲ.
ಅಂತೆಯೇ, ಒಂದು ದೊಡ್ಡ ಕೆಲಸವನ್ನೇ ಮಾಡುತ್ತಿರುವವನಿಗೆ ಅದರ ಜೊತೆಗಿನ ಸಣ್ಣ ಕೆಲಸವೇನೂ ಕಷ್ಟವಲ್ಲ ಎಂಬ ಅರ್ಥ. ಇದು ಅಶ್ಲೀಲ ಗಾದೆಯಾದ್ದರಿಂದ ಸಾಮಾನ್ಯವಾಗಿ ಇದನ್ನು ಬೇರೆಯವರ ಕೆಲಸವನ್ನು ಮನಸ್ಸಿಲ್ಲದಿದ್ದರೂ ಮಾಡಬೇಕಾಗಿ ಬಂದಾಗ ಅದರ ಜೊತೆ ಬಂದು ಸೇರುವ ಇನ್ನೊಂದು ಕೆಲಸದ ಬಗ್ಗೆ ಹೇಳುತ್ತಾರೆ.

5 comments:

Unknown said...

ಹೆಣ ಹೊರುವವನಿಗೆ ಹಿಂದಾದರೇನು ಮುಂದಾದರೇನು?

(ಶೇಕಡಾ ೨೫ ತೂಕ ತನ್ನ ಹೆಗಲ ಮೇಲೆ)

Seema S. Hegde said...

@ ತಿರುಕ,
ನೀವು ಹೇಳಿದ ಗಾದೆ ಸ್ವಲ್ಪ ಬೇರೆ ಸಂದರ್ಭಕ್ಕೆನೋ ಅಂತ ಅನಿಸ್ತಾ ಇತ್ತು, ಅದಕ್ಕೆ ಇದರ ಜೊತೆ ಬೇಡ ಪ್ರತ್ಯೇಕವಾಗಿ ಹಾಕೋಣ ಅಂತ ಇದ್ದೀನಿ.
ಭೇಟಿ ಕೊಟ್ಟಿದ್ದಕ್ಕೆ, ಕಮೆಂಟಿಸಿದ್ದಕ್ಕೆ ಧನ್ಯವಾದಗಳು :)

ವಿ.ರಾ.ಹೆ. said...

ಹೆಣ ಹೊರುವವನಿಗೆ ’ಅದು’ ಭಾರವಾ ಅಂತ ಇರಕ್ಕಾಗಿತ್ತು :)

Seema S. Hegde said...

@ ವಿಕಾಸ,
ಅದು ಹಂಗಲ್ಲಾ...
ಹೆಣ ಹೊರುವವನಿಗೆ 'ಅದು' ಭಾರ ಅಲ್ಲ.... ಅಂದರೆ ಹೆಣ ಹೊರುವವನ ದೇಹದ ಭಾಗದ ವಿಚಾರ ಅಲ್ಲ.

ಹೆಣವನ್ನೇ ಹೊರುತ್ತಿರುವಾಗ ಹೆಣದ ಇನ್ನೊಂದು ಭಾಗ (ಏನೋ) ಭಾರವಲ್ಲ... ಅಂದರೆ ಹೆಣದ ದೇಹದ ಭಾಗದ ವಿಚಾರ :)

ವಿ.ರಾ.ಹೆ. said...

yes, i got it now :)
thanx