March 5, 2008

ಗಾದೆ ಹೇಳುವವನ… (ಉತ್ತರ ಕನ್ನಡದ ಗಾದೆ – 180, 181 ಮತ್ತು 182)

ಗಾದೆ ಹೇಳುವವನ ಬಾಯಿಗೆ ಬೂದಿ ಬೀಳುತ್ತದೆ.

ಹೌದು, ಹೀಗೂ ಒಂದು ಗಾದೆ ಇದೆ. ಗಾದೆ ಹೇಳುವ ರೂಢಿ ಇರುವವರು ಒಂದು ಗಾದೆ ಹೇಳಿಕೊಂಡು ತಮಗೇ ತಾವು ಹೇಳಿಕೊಳ್ಳುವ ಇನ್ನೊಂದು ಗಾದೆ ಇದು. ಹಾಗಾಗಿ ನಾನು ಕೊಟ್ಟ ಗಾದೆಗಳನ್ನೆಲ್ಲ ಹೇಳಿಕೊಂಡು ಓಡಾಡುವ idea ನಿಮಗಿದ್ದರೆ ಸ್ವಲ್ಪ ಯೋಚನೆ ಮಾಡಿ! ಇನ್ನೂ ಒಂದು ಎಚ್ಚರಿಕೆ... ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲವಂತೆ!!


ಈ ನನ್ನ ಗಾದೆಗಳ ಪ್ರವಾಹಕ್ಕೆ ಒಂದು ಅಲ್ಪವಿರಾಮ ಹಾಕುತ್ತಿದ್ದೇನೆ. ಅನಿವಾರ್ಯ ಕಾರಣಗಳಿಂದಾಗಿ ಒಂದೆರಡು ತಿಂಗಳುಗಳ ಕಾಲ blog ಜೀವನಕ್ಕೆ ವಿದ್ಯುಕ್ತವಾಗಿ ರಜೆ ಘೋಷಿಸುತ್ತಿದ್ದೇನೆ. ನಿಮ್ಮೆಲ್ಲರ ಶುಭ ಹಾರೈಕೆಗಳಿದ್ದರೆ ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಗಾದೆಗಳನ್ನು ನಿಮಗೆ ಕೊಟ್ಟೇನು. ಎಲ್ಲಾ commitment ಗಳನ್ನೂ ಮುಗಿಸಿ ಎಂದು ಹಿಂದಿರುಗುತ್ತೇನೆಂದು ನಿರ್ದಿಷ್ಟವಾಗಿ ಹೇಳಲಾರೆ. ಇತರ ಎಲ್ಲಾ ಕೆಲಸಗಳನ್ನು ಮುಗಿಸಿ ಬರುವುದು ಎಂದರೆ ತೆರೆ ಕಳೆದು ಸಮುದ್ರ ಮುಳುಗಿದಂತೆ. ಆದರೆ ಇಷ್ಟು ದಿನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನಿಮ್ಮೆಲ್ಲರನ್ನೂ ನಾನು miss ಮಾಡಿಕೊಳ್ಳಲಿರುವುದಂತೂ ನಿಜ. ಏನೋ ಒಂಥರಾ ಬೇಜಾರಾಗ್ತಾ ಇದೆ. ತನ್ನ ಮಗುವನ್ನು ಎಲ್ಲೋ ನಡುದಾರಿಯಲ್ಲಿ ಅನಾಥವಾಗಿ ಬಿಟ್ಟು ಸ್ವಲ್ಪ ಕಾಯುತ್ತಿರು ಮತ್ತೆ ಬರುತ್ತೇನೆ ಎಂದು ಹೊರಟ ಅಮ್ಮ ಆಗಿದ್ದೇನೆ ಬಹುಶ. ಹಿಂದಿರುಗಿ ಎಂದು ಬರುತ್ತೇನೆ ಎಂಬುದು ಅಮ್ಮನಿಗೂ ಸರಿಯಾಗಿ ಗೊತ್ತಿಲ್ಲ. ಅಥವಾ ನನ್ನದೇ ದೇಹದ ಒಂದು ಅಂಗವನ್ನು ಕಿತ್ತಿಟ್ಟು ಇನ್ನೆಲ್ಲೋ ಹೊರಟಂತೆ... ನಾನು ಪ್ರೀತಿಯಿಂದ ಸಾಕಿ ಸಲಹಿದ blog... ಅಯ್ಯೋ ಹೋಗ್ಲಿ ಬಿಡಿ ಯಾಕೆ ಈಗ ಅವೆಲ್ಲಾ ಪುರಾಣ?

ನಿಮಗೆಲ್ಲಾ ದಿನಾಲೂ ಒಂದು ಗಾದೆಯ ಸಲುವಾಗಿ ನನ್ನ blog ಗೆ ಇಣುಕುವ ಕೆಲಸ ತಿಪ್ಪಿತು. ಒಂದು ಗಾದೆಯನ್ನು ಓದುವ ಆಸೆಗಾಗಿ ನಾನು ಬರೆಯುತ್ತಿದ್ದ ಉಳಿದೆಲ್ಲಾ bla bla bla ಗಳನ್ನೆಲ್ಲಾ ಓದುವ ತೊಂದರೆಯಿಲ್ಲ- ಅಗುಳು ಬರುತ್ತದೆ ಎಂದು ತಿಳಿ ಕುಡಿದಂತೆ.

ಸದ್ಯಕ್ಕೆ ಮಜಾ ಮಾಡಿ. ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲ್ಲಿ ಎಂದು ಮುಂದೆ ಮತ್ತೆ ಬರಲಿದ್ದೇನೆ :)

28 comments:

ಸುಪ್ತದೀಪ್ತಿ suptadeepti said...

ಕಾರಣ ಯಾವುದೇ ಇರಲಿ ಸೀಮಾ, ನಿಮ್ಮ ರಜೆ ಸಾಂಗವಾಗಿ ಕಳೆಯಲಿ. ಖುಷಿ ಮತ್ತು ಆರೋಗ್ಯ ನಿಮಗಿರಲಿ. ಸುಖವಾಗಿರಿ.

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕ,
ಯಾಕೆ ಇಷ್ಟೆಲ್ಲ ಬೇಜಾರು. ಬೇಗ ಬಂದು ಮತ್ತೆ ಆರಂಭಿಸು.
"Happy journey"
ನೀ ಹೋಗಿಬರುವಲ್ಲಿ ನಾನೂ ಬರಲೇ? :)

ವಿ.ರಾ.ಹೆ. said...

ಶುಭ ಹಾರೈಕೆ ಯಾವಾಗ್ಲೂ ಇದ್ದೇ ಇರ್ತು.

bla blaನು ಇಲ್ಲೆ ಎಂತದೂ ಇಲ್ಲೆ. ಇನ್ನು ಕೆಲವು ದಿನಗಳು(ಕೆಲವೇ ದಿನಗಳು ಅಷ್ಟೆ, ನೆನಪಿರಲಿ) missing ur blog writings. ಅಷ್ಟು ಒಳ್ಳೆ ಗಾದೆಗಳು, ಜೀವನಾನುಭವ, ಪಾಠ ಎಲ್ಲಾ ಹೇಳಿಕೊಟ್ಟ ಅಮ್ಮನಿಗಾಗಿ ಬ್ಲಾಗಿನ ಜೊತೆಗೇ ಕಾಯ್ತಾ ಇರ್ತಿ.

All the best.

Smadurk Infotech said...

Nieevu bareva reethi tumba tumba muddaagide..padagala jodane adbhutavaagide…

Nanna putaani blog

www.navilagari.wordpress.com

idakke nimma blaag rolnalli swalpa jaaga kodi:)

Nimma somu

Sushrutha Dodderi said...

ಸೀಮಕ್ಕ,

ನಮಸ್ಕಾರ. ಹೇಗಿದ್ದೀ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

sunaath said...

ನಿಮ್ಮ ಗಾದೆ ಮಾತುಗಳಿಗಾಗಿ ಕಾಯುತ್ತ ಇರುತ್ತಿರುತ್ತೇವೆ. ಬೇಗ ಬನ್ನಿ.

sritri said...

ಸೀಮಾ.... ಎಲ್ರೀ ಹೋಗ್ರೀರಿ ನಮ್ಮನ್ನೆಲ್ಲಾ ಬಿಟ್ಟು?

ಹೇಳಿ ಹೋಗು ಕಾರಣ...ಹೋಗುವ ಮೊದಲು.

ಬೇಗ ಬನ್ನಿ. ಕಾಯುತ್ತಿರುತ್ತೇವೆ.

Anonymous said...
This comment has been removed by a blog administrator.
ಪೂರ್ಣ ವಿ-ರಾಮ said...

ನಿಮಗಿರುವ ಅ"ಗಾಧ" ಪಾಂಡಿತ್ಯಕ್ಕೆ ದೊಡ್ಡ ಸಲಾಂಆದರೂ ಇನ್ನೊಂದಿಷ್ಟು ಗಾದೆಗಳಿದ್ದವು. ಅವುಗಳನ್ನೂ ಕ್ರೂಢೀಕರಿಸಿದ್ದರೆ ಚೆನ್ನಾಗಿರುತ್ತಿತ್ತೇನೋ...

ಬಟ್ ಎನಿ ವೇ ವೆರಿ ನೈಸ್ಸ್‌ಸ್ಸ್ಸ್

ಥ್ಯಾಂಕ್ಯೂ ಸೀಈಈಈಈಈಮಾಆಆಆಆಆ

Seema S. Hegde said...

ಇಷ್ಟೊಂದು ಆತ್ಮೀಯತೆ ತೋರುತ್ತಿರುವ ನಿಮಗೆಲ್ಲಾ ನಾನು ಋಣಿ. ಮರಳಿ ಬರುವೆ.
ಇಂತಿ ನಿಮ್ಮೆಲ್ಲರ,
ಸೀಮಾ.

Anonymous said...
This comment has been removed by a blog administrator.
Harisha - ಹರೀಶ said...

ಸೀಮಕ್ಕ, ಭಾರತಕ್ಕೆ ಬರೋ ಖುಷಿ, ಬ್ಲಾಗ್‍ನಿಂದ ಸ್ವಲ್ಪ ದಿವಸ ದೂರ ಆಗೋ ದುಃಖ.. ಏನೋ ಒಂಥರ... ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಹೇಳ್ತ್ವಲ್ಲ.. ಹಂಗೆ..

ಎನಿವೇ, ಭಾರತಕ್ಕೆ ಸುಸ್ವಾಗತ! ಹ್ಯಾಪಿ ಜರ್ನಿ... ಬೆಂಗಳೂರಿನಲ್ಲಿ ಆದ್ರೆ ಸಿಗನ.. :)

bhadra said...

ಸದ್ಯಕ್ಕೆ ಮಜಾ ಮಾಡಿದೆ
ಇನ್ನು ಹೆಚ್ಚಿಗೆ ಪೋಸ್ಟಿಸದಿದ್ದರೆ ಸಜಾ ಕೊಡುವೆ :P

ಬಹಳ ಉತ್ತಮ ಕೆಲಸ ಮಾಡುತ್ತಿದ್ದೀರಿ
ಅಪರೂಪದ ಗಾದೆಗಳನ್ನೆಲ್ಲಾ ನಾನು ಓದುತ್ತಿರುವೆ

ಸತ್ಕಾರ್ಯ ಅನವರತ ನಡೆಯಲಿ
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ

Anonymous said...
This comment has been removed by a blog administrator.
Seema S. Hegde said...

Harish and Srinivas,
Thanks a lot :)

Anonymous said...
This comment has been removed by a blog administrator.
Anonymous said...

Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the Celulite, I hope you enjoy. The address is http://eliminando-a-celulite.blogspot.com. A hug.

Seema S. Hegde said...

@ Celulite,
Thanks.

Anonymous said...
This comment has been removed by a blog administrator.
Sushrutha Dodderi said...

hello.. elli hodri? yavaga vapas?

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕೋ....ಕೂ ಹೋಯ್.....
ಎಲ್ಲಿದ್ರೂ ಲಗು ಬರವಡ...ಮಂಗಳಾರ್ತಿಗಾತಡ.....:)

ಕನಸು said...

ಕನ್ನಡದಲ್ಲಿ ಬೇಕಾದಷ್ಟು ಬ್ಲಾಗ್ ಇದೆ.ಆದ್ರೆ,ಬಹುತೇಕ ಎಲ್ಲಾ ಬ್ಲಾಗಿಗರು ಭಾವನಾಲೋಕದ ಪಯಣಿಗರು. ಹೀಗಾಗಿ,ಗಾದೆಗಳ ಬಗ್ಗೆ ಹೇಳುತ್ತಾ ಭಾವನೆಗಳನ್ನೂ ವ್ಯಕ್ತಪಡಿಸೋ ನಿಮ್ಮ ಬ್ಲಾಗ್ ಒಂಥರಾ ಖುಷಿ ಕೊಡೊತ್ತೆ. ಕನ್ನಡಕ್ಕೆ ಈ ತರಾ ವಿಭಿನ್ನ ಬ್ಲಾಗ್ ಗಳ ಅಗತ್ಯ ಇದೆ. ಮೊದಲ ನೋಟಕ್ಕೆ ನನ್ನ ಇಂಪ್ರೆಸ್ ಮಾಡಿದ್ದೀರಾ ....

ಜಾತ್ರೆ said...

Registration- Seminar on the occasion of kannadasaahithya.com 8th year Celebration

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannadaPlease do come and forward the same to your like minded friends

-kannadasaahithya.com balaga

Harisha - ಹರೀಶ said...

O genki desu ka? Nanika atta? Dou shiteru? Doko ni iru no?

Shree said...

Seema, Long time no see... Why stopped writing? I love to hear about Japan! :)

ವಿ.ರಾ.ಹೆ. said...

:( :(

Unknown said...

ನಮ್ಮೂರಿನ ಗಾದೆಯ ಸಂಗ್ರಹ ಚೆನ್ನಾಗಿದ್ದು.....

Seema S. Hegde said...

@ ಸುಶ್ರುತ, ಶಂತಾಲಾ, ಕನಸು, ಜಾತ್ರೆ, ಹರೀಶ, ಶ್ರೀ, ವಿಕಾಸ, ಮತ್ತು ಗಜಾನನ

ಮನೆ ಬಾಗಿಲು ಹಾಕಿದ್ದಾಗ ಬಂದು ಬಾಗಿಲು ಬಡಿದು, ಗುರುತಿನ ಚೀಟಿ ಇಟ್ಟು ಹೋಗಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.
ಬಾಗಿಲು ತೆರೆದಿದೆ, ಪುನಃ ಬನ್ನಿ :)