October 31, 2010

ಅಪ್ಪಯ್ಯ ನನಗೆ ಹೊಡೆದ (ಉತ್ತರ ಕನ್ನಡದ ಗಾದೆ – 241 ಮತ್ತು 242 )

ಅಪ್ಪಯ್ಯ ನನಗೆ ಹೊಡೆದ, ನಾನು ಸಣ್ಣ ಮಾಣಿಗೆ ಹೊಡೆದೆ.
ತಪ್ಪು ಮಾಡಿದ್ದಕ್ಕಾಗಿ ಅಪ್ಪ ಹೊಡೆದಾಗ ಮಗ ಇನ್ನೇನೂ ಮಾಡುವಂತಿಲ್ಲ; ಹೊಡೆತ ತಿಂದ ಸಿಟ್ಟನ್ನು, ಬೇಸರವನ್ನೂ ತೀರಿಸಿಕೊಳ್ಳುವ ಸಲುವಾಗಿ ತನ್ನ ತಮ್ಮನಿಗೆ ಹೊಡೆಯುತ್ತಾನೆ. Boss ನಮ್ಮ ಮೇಲೆ ಸಿಟ್ಟನ್ನು ತೋರಿಸಿದಾಗ ನಾವು ಅಸಹಾಯಕರಾಗಿ, ಇನ್ನೇನೂ ಮಾಡಲರಿಯದೇ ನಮ್ಮ assistant ಮೇಲೆ ಸಿಟ್ಟು ಮಾಡುವಂಥದು. ಇಂಥದೇ ಇನ್ನೊಂದು- ಅತ್ತೆಯ ಮೇಲಿನ ಸಿಟ್ಟು ತೊತ್ತಿನ ಮೇಲೆ. ಅತ್ತೆಯ ಮೇಲೆ ಸಿಟ್ಟನ್ನು ತೋರಿಸುವಂತಿಲ್ಲ. ಅದಕ್ಕೇ ಸೊಸೆ ಕೆಲಸದವಳ ಮೇಲೆ ಸಿಟ್ಟು ತೋರಿಸುತ್ತಾಳೆ.

October 8, 2010

ಶ್ವೇತಾ ಜೊತೆ ಕರಡಿ


ನನ್ನ ಬಾಲ್ಯ ಸ್ನೇಹಿತನೊಬ್ಬ photographer. ಅಪಾರ ಸಮಯಪ್ರಜ್ಞೆಯುಳ್ಳವ. ಎಲ್ಲಿ ಹೋದರೂ ನಮ್ಮ ಯಾರ ಕಣ್ಣಿಗೂ ಬೀಳದಿದ್ದುದು ಅವನ camera ಕಣ್ಣಿಗೆ ಬಿದ್ದಿರುತ್ತದೆ. ಈ photo ಒಂದು ಉದಾಹರಣೆ ಅಷ್ಟೇ. ಎಲ್ಲೋ ಮದುವೆಯ phtography ಗೆ ಹೋದಾಗ ಇದನ್ನು ತೆಗೆದು ನನಗೆ ಕಳಿಸಿಕೊಟ್ಟಿದ್ದಾನೆ. Thanks to him (ಅವನಿಷ್ಟದಂತೆಯೇ ಅವನ ಹೆಸರನ್ನು ಹಾಕುತ್ತಿಲ್ಲ). ಆದರೆ ಅವನ ಸಮಯಪ್ರಜ್ಞೆಯನ್ನು ಹೊಗಳದೇ ಇರಲಾದೀತೇ? ಅಂದಹಾಗೆ ಮದುಮಗನ ಹೆಸರು ಶಂಕರ ಡಿ.